ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಭಕ್ತವೃಂದದ ವತಿಯಿಂದ ದೇವಸ್ಥಾನಗಳಿಗೆ
ತುಂಡು ಬಟ್ಟೆ ಧರಿಸಿ ಬರದಂತೆ ಸಾರ್ವಜನಿಕ ರಲ್ಲಿ ವಿಶೇಷವಾಗಿ ಜಾಗೃತಿ ಮಂಡಿಸಲಾಯಿತು.
ಗುರವಾರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ಚಾಮುಂಡಿ ಬೆಟ್ಟ ಸೇರಿದಂತೆ ಸರ್ಕಾರದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಬಿತ್ತಿ ಪತ್ರ ಪ್ರದರ್ಶಿಸಿ ಭಕ್ತಾದಿಗಳಿಗೆ ಗುಲಾಬಿ ನೀಡುವ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಚಾಮುಂಡೇಶ್ವರಿ ಭಕ್ತ ವೃಂದದ ಸಂಚಾಲಕ ಆನಂದ್, ಸಾಂಸ್ಕೃತಿಕ ರಾಜಧಾನಿ ಮೈಸೂರು ಎಂದು ಹೆಸರು ಬರಲು ಮೈಸೂರಿಗರ ಸಂಸ್ಕಾರ ಸಂಸ್ಕೃತಯೇ ಕಾರಣ, ಪಾವಿತ್ರ್ಯತೆ ಪ್ರಾಚೀನವಾದ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಆಷಾಢ ಅಂಗವಾಗಿ ಬರುವವರು ನಮ್ಮ ಸಾಂಸ್ಕೃತಿಕ ಉಡುಪನ್ನ ಧರಿಸಿ ಬರಬೇಕು ಎಂದು ಮನವಿ ಮಾಡಿದರು.
ಸರ್ಕಾರ ವಸ್ತ್ರನೀತಿ ಸಂಹಿತೆ ತರದಿದ್ದರೂ ಪರವಾಗಿಲ್ಲ ನಮ್ಮ ಸಂಸ್ಕೃತಿಯನ್ನ ಪಾಲಿಸುವುದು ನಮ್ಮ ಕರ್ತವ್ಯ, ತಿರುಪತಿ ವೇಂಕಟೇಶ್ವರ ಸನ್ನಿಧಿ, ಕೇರಳದ ಶಿವನ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಿಗೆ ಕೋಟ್ಯಾಂತರ ಭಕ್ತರು ವಸ್ತ್ರಸಂಹಿತೆ ಪಾಲಿಸಿ ಬರುತ್ತಾರೆ, ನಮ್ಮ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನ ಉಳಿಸಿ ಪಾಲಿಸುವಲ್ಲಿ ಯುವ ಪೀಳಿಗೆ ಮುಂದಾಗಲಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಮಹೇಶ್, ಶೃತಿ, ಶ್ವೇತ, ಕಿರಣ್, ಬಸವರಾಜು, ಮಣಿ, ಸೌಮ್ಯ, ಚಂದ್ರು, ಶೇಖರ್, ಕಲ್ಪನ,ತಾಯಮ್ಮ ಸರೋಜ ಜಲಜಾಕ್ಷಿ ಮತ್ತಿತರರು ಹಾಜರಿದ್ದರು.