ಮೈಸೂರು: ಜಾಗದ ವಿಚಾರ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಕ್ಷಿತ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು
ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 21 ಮಾನಸ ನಗರ ಕುದುರೆಮಾಳ ನಿವಾಸಿಗಳಿಗೆ ಅನುಮೋದನೆಗೊಂಡಿದ್ದ ಯೂತ್ ಹಾಸ್ಟೆಲ್ ಸಮೀಪದ ಜಾಗದ ವಿಚಾರವಾಗಿ ಪ್ರತಾಪ್ ಸಿಂಹ ಅವರು ರಕ್ಷಿತ್ ಅವರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ , ಬಿಜೆಪಿ ಮುಖಂಡರಾದ ಬೊ.ಉಮೇಶ್ ಆರ್. ಪರಮೇಶ ಗೌಡ,ದೇವರಾಜ್, ನಂಜಪ್ಪ ಶ್ರವಣ್ ಮಾಲಿ, ಅಶೋಕ್, ಪ್ರಮೋದ್ ಹಾಗೂ ಮಾನಸ ನಗರ ಕುದುರೆಮಾಳ ಮುಖಂಡರಾದ ಮಹದೇವ್, ಮಹೇಂದ್ರ, ಕೃಷ್ಣ, ರಾಮು, ಗೌತಮ್ ಹಾಗೂ ಮುಖಂಡರು ಹಾಜರಿದ್ದರು.

