ಮೈಸೂರು ಪೊಲೀಸರಿಂದ ವಿಶೇಷ ಕಾರ್ಯಾಚರಣೆ

ಮೈಸೂರು: ಅಪರಾಧ ತಡೆ ಮಾಸಾಚರಣೆ ಹಿನ್ನಲೆಯಲ್ಲಿ ಮೈಸೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದು‌ ಸ್ಮಷಾನದಲ್ಲೂ ಪರಿಶೀಲನೆ ನಡೆಸಿದರು.

ವಿಜಯನಗರ ಉಪವಿಭಾಗದ ಪೊಲೀಸರು ಕಿಡಿಗೇಡಿಗಳು,ಸಮಾಜಘಾತುಕರ ಹೆಡೆ ಮುರಿ ಕಟ್ಟಲು ಸಿದ್ದ ಎಂಬ ಸಂದೇಶ ಹೊರಡಿಸಿದ್ದಾರೆ.

ಈಗಾಗಲೇ ಶಾಲಾ ಮಕ್ಕಳ ಸಮೇತ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಮೇಟಗಳ್ಳಿ ಠಾಣೆಯಿಂದ ಆರಂಭವಾದ ಜಾಗೃತಿ ಜಾಥಾ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊನೆಗೊಂಡಿದೆ.

ವಿಜಯನಗರ ಉಪವಿಭಾಗದ ಎಸಿಪಿ ರವಿಪ್ರಸಾದ್ ರವರ ನೇತೃತ್ವದಲ್ಲಿ ಮೇಟಗಳ್ಳಿ ಠಾಣೆಯ ಇನ್ಸ್ಪೆಕ್ಟರ್ ಅರುಣ್ ರವರು ತಮ್ಮ ಸಿಬ್ಬಂದಿ ಜೊತೆ ಮೇಟಗಳ್ಳಿ ಸ್ಮಶಾನಕ್ಕೆ ರಾತ್ರಿ ವೇಳೆ ಧಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಸ್ಮಶಾನದಲ್ಲಿ ಅನೈತಿಕ ಚಟುವಟಿಕೆಗಳು,ಗಾಂಜಾ ಸೇವನೆ ಇತ್ಯಾದಿ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಧಿಢೀರ್ ಕೈಕೊಟ್ಟಾಗ ಇಲ್ಲಿ ಮತ್ತೆ ವಿದ್ಯುತ್ ಕೈಕೊಟ್ಟಿದೆ.

ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದೇ ಕಿಡಿಗೇಡಿಗಳಿಗೆ ಅನುಕೂಲವಾಗಿದೆ ಎಂಬ ಆರೋಪ ಇದೆ‌.ಇನ್ನಾದರೂ ವಿದ್ಯುತ್ ಪೂರೈಸಿ ಅಕ್ರಮ ಚಟುವಟಿಕೆ ಹಾಗೂ ಪುಂಡು ಪೋಕರಿಗಳ ಉಪಟಳ ತಪ್ಪೀತೆ ನೋಡಬೇಕಿದೆ.