ಅರಮನೆ ಬಳಿ ಸ್ಪೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು: ಮೈಸೂರು ಅರಮನೆ ಮುಂಭಾಗ ಗುರುವಾರ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಲಕ್ಷ್ಮಿ ಮೃತ ಮಹಿಳೆಯಾಗಿದ್ದಾರೆ.ಸ್ಪೋಟ ನಡೆದಾಗ ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಲಕ್ಷ್ಮೀ ಅವರು ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿ ರಾಜೇಶ್ ‌ಅವರ ಪತ್ನಿ. ಮೂಲತಃ ಮಂಡ್ಯದ ಹೊಸಹಳ್ಳಿ ಗ್ರಾಮದ ನಿವಾಸಿ.

ರಾಜೇಶ್ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ನೆನ್ನೆ ಮೈಸೂರಿನ ಬೆಳವಾಡಿಯ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಅರಮನೆ ನೋಡಲೆಂದು ಬಂದಿದ್ದರು.

ಸ್ಪೋಟದ ವೆಳೆ ಲಕ್ಷ್ಮಿ ಅವರ
ಹೊಟ್ಟೆಯಿಂದ ಕರುಳಿನ ಭಾಗ ಕಿತ್ತು ಬಂದಿತ್ತು
ತಲೆ, ಕೈ , ಕಾಲಿನ ಭಾಗ ಕೂಡ ಛಿದ್ರವಾಗಿತ್ತು,ಹಾಗಾಗಿ ಅವರು ಮೃತಪಟ್ಟಿದ್ದಾರೆ.