ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನಲ್ಲಿ ಅಪರಾಧ ಚಟುವಟಿಕೆಗಳು ಮಿತಿಮೀರಿದ್ದು,ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಕಳ್ಳತನ,ದರೋಡೆ,ಸುಲಿಗೆ ಪ್ರಕರಣಗಳು ಹೆಚ್ಚುತ್ತಿದೆ.ಒಂದೊಂದು ಪ್ರಕರಣಗಳೂ ಪೊಲೀಸರ ನಿದ್ದೆಗೆಡಿಸಿದೆ.
ಅಪರಾಧ ತಡೆಯಲು ಶತಪ್ರಯತ್ನ ಮಾಡುತ್ತಿದ್ದರೆ ದುಷ್ಕರ್ಮಿಗಳು ಪೊಲೀಸರನ್ನೇ ಯಾಮಾರಿಸುತ್ತಿದ್ದಾರೆ.
ರಾತ್ರಿವೇಳೆ ಅಂಗಡಿಗಳು ಮನೆಗಳಿಗೆ ಕನ್ನ ಹಾಕುವ ಪ್ರಕರಣಗಳಿಂದಾಗಿ ಜನ ಬೆಚ್ಚಿಬಿದ್ದಿದ್ದಾರೆ.
ಇತ್ತೀಚೆಗಷ್ಟೆ ಮುಸುಕುಧಾರಿಗಳು ಮಾರಕಾಸ್ತ್ರಗಳನ್ನ ಹಿಡಿದು ರಾಜಾರೋಷವಾಗಿ ಅಡ್ಡಾಡಿದ ದೃಶ್ಯಗಳು ಮಾಸುವ ಮುನ್ನವೇ ಒಂದೇ ರಾತ್ರಿ 10 ಕ್ಕೂ ಹೆಚ್ಚು ಅಂಗಡಿಗಳಿಗೆ ಕಳ್ಳರು ಲಗ್ಗೆ ಹಾಕಿದ್ದಾರೆ.
ಅಂಗಡಿಗಳ ಬೀಗ ಮುರಿದು ಒಳನುಗ್ಗಿ ವಸ್ತುಗಳನ್ನು ದೋಚಿದ್ದಾರೆ, ಪಟ್ಟಣ ಠಾಣೆ ಸಮೀಪವೇ ಕೃತ್ಯ ನಡೆದಿರುವುದು ವಿಪರ್ಯಾಸದ ಸಂಗತಿ.
ಠಾಣೆ ಸಮೀಪದಲ್ಲಿ ಎರಡು ಅಂಗಡಿಗಳು ಹಾಗೂ ರಾಷ್ಟ್ರಪತಿ ರಸ್ತೆಯ ನಾಲ್ಕು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ಘಟನೆ ನಡೆದು 24 ಗಂಟೆ ಕಳೆದರೂ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಉಸುಕುಧಾರಿಯೊಬ್ಬ ಮಧ್ಯರಾತ್ರಿ ವೇಳೆ ಅಂಗಡಿಗೆ ನುಗ್ಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಷ್ಟೆಲ್ಲಾ ಆಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ,ಇದು ಯಕ್ಷ ಪ್ರಶ್ನೆಯಾಗಿದೆ.
ಸಂಚಾರಿ ನಿಯಮಗಳನ್ನ ಪಾಲಿಸಲು ಸಿಬ್ಬಂದಿಗಳನ್ನ ನಿಯೋಜಿಸಲು ಮುಂದಾಗುವ ಪೊಲೀಸರು,ನೈಟ್ ಬೀಟ್ ಹೆಚ್ಚಿಸುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ.

