ಕಿಡಿಗೇಡಿಗಳ ಕ್ರೌರ್ಯಕ್ಕೆ ನಲುಗಿದ ಅಡಿಕೆ,ಬಾಳೆ ಬೆಳೆ

ಮಂಡ್ಯ: ವೈಯುಕ್ತಿಕ ಧ್ವೇಷಕ್ಕೆ ಅಡಿಕೆ ಹಾಗೂ ಬಾಳೆ ಬೆಳೆ ನಾಶ ಮಾಡಿರುವ ಹೇಯ‌ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ.

ಸೊಳ್ಳೆಪುರ ಗ್ರಾಮದ ರೈತ ರವಿ ಎಂಬುವರಿಗೆ ಸೇರಿದ 500 ಅಡಿಕೆ ಸಸಿ ಹಾಗೂ ಬಾಳೆ ನಾಶವಾಗಿದೆ.

ಫಸಲಿಗೆ ಬಂದ 500 ಬಾಳೆ ಗಿಡಗಳನ್ನು ಕಡಿದು ಕಿಡಿಗೇಡಿಗಳು ಕ್ರೌರ್ಯ ಮೆರೆದಿದ್ದಾರೆ.

ರವಿ ಅವರು 2 ವರ್ಷಗಳಿಂದ ಸಾಲ ಮಾಡಿ ಅಡಿಕೆ ಸಸಿ ಹಾಗೂ ಬಾಳೆಯನ್ನು ಬೆಳೆಸಿದ್ದರು.ಫಲಕ್ಕೆ ಬಂದದ್ದು ಬಾಳೆ ಗಿಡಗಳನ್ನ ಕಡಿದು, ಪೈಪ್ ಗೇಟ್ ವಾಲ್ ಗಳನ್ನು ಧ್ವಂಸ ಮಾಡಿದ್ದಾರೆ.

ವೈಯಕ್ತಿಕ ದ್ವೇಷದಿಂದ ‌ಕಿಡಿಗೇಡಿಗಳು ರಾತ್ರಿ ತೋಟಕ್ಕೆ ನುಗ್ಗಿ ಅಡಿಕೆ-ಬಾಳೆ ಗಿಡಗಳನ್ನು ನಾಶ ಮಾಡಿದ್ದಾರೆ.ಇದರಿಂದಾಗಿ ಸುಮಾರು 2 ಲಕ್ಷ ನಷ್ಟ ಉಂಟಾಗಿದ್ದು,ರವಿ ಕಂಗಾಲಾಗಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ರವಿ, ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.