ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಚುಂಚನಹಳ್ಳಿ ಗ್ರಾಮದೇವತೆ ಮಾರಮ್ಮನ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ನೆರವೇರಿತು.
ಈ ವೇಳೆ ಭಕ್ತರು ಬಾಯಿಗೆ ಬೀಗ ಹಾಕಿ ಹರಕೆ ಸಲ್ಲಿಸಿದರು.
ಚುಂಚನಹಳ್ಳಿ ಮುದ್ದುಮಾದಯ್ಯ ಎಂಬ ಭಕ್ತ 12 ಸರಳುಗಳನ್ನ ಚುಚ್ಚಿಕೊಂಡು ಹರಕೆ ತೀರಿಸಿದರು.
ಹಲವು ಕಟ್ಟುಪಾಡುಗಳನ್ನ ಪಾಲಿಸಿ,ಮಡಿ ಸೇವೆ ಸಲ್ಲಿಸಿ,ನಂತರ ಹೆಬ್ಬರಕ್ಕೆ ಅಕ್ಕಿ ಎಣ್ಣೆ ಹಾಕಿ ಪೂಜೆ ಸಲ್ಲಿಸಲಾಯಿತು.
ಬೆಳಗಿನ ಜಾವದಲ್ಲಿ ಹೆಬ್ಬರಕ್ಕೆ ಮಹಿಳೆಯರು ಅಕ್ಕಿ ಎಣ್ಣೆ ಹಾಕಿ ಪೂಜೆ ಸಲ್ಲಿಸಿದರು.ಬಾಲೆಯರು
ತಂಬಿಟ್ಟು ತಂಪೋತ್ಸವದಲ್ಲಿ ಭಾಗಿಯಾದರು.
ಕೆಲವು ಭಕ್ತರು ಬಾಯಿ, ಕಿವಿ, ಕತ್ತಿಗೆ ಸರಳು ಚುಚ್ಚಿಕೊಂಡು ಮಾರಮ್ಮನಿಗೆ ಹರಕೆ ಸಲ್ಲಿಸಿದರು.
ಮೂರು ದಿನಗಳ ಕಾಲ ನಡೆಯುವ ಗ್ರಾಮದ ದೇವತೆಯ ಹಬ್ಬದ ಸಂದರ್ಭದಲ್ಲಿ ಬಟ್ಟೆ ಒಗೆಯುವಂತಿಲ್ಲ, ಬೇರೆ ಗ್ರಾಮಗಳಿಗೆ ತೆರಳುವಂತಿಲ್ಲ, ಪೊರಕೆಯಲ್ಲಿ ಕಸ ಗುಡಿಸುವಂತಿಲ್ಲ, ಒಗ್ಗರಣೆ ಹಾಕುವಂತಿಲ್ಲ ಹೀಗೆ ಹಲವು ಕಟ್ಟುಪಾಡುಗಳೊಂದಿಗೆ ಜಾತ್ರೆ ನೆರವೇರಿತು.

