ಮೈಸೂರು: ಮೈಸೂರು ನಗರ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಡಾ. ಹರ್ಷ ಪ್ರಿಯಂವದ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
2020ರ ಐಪಿಎಸ್ ಬ್ಯಾಚ್‌ನ ಹರ್ಷ ಪ್ರಿಯಂವದ ಅವರು ಆರಂಭದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಎಎಸ್‌ಪಿಯಾಗಿ ಕಾರ್ಯನಿರ್ವಹಿಸಿ ದರು.
ನಂತರ ಬೆಂಗಳೂರಿನ ಅಪರಾಧ ತನಿಖೆ ವಿಭಾಗ (ಸಿಐಡಿ)ದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.ಈಗ ಡಿಸಿಪಿಯಾಗಿ ವರ್ಗಾವಣೆ ಆಗಿದ್ದಾರೆ.
2025ರ ಡಿ.31ರಂದು ಈ ಹಿಂದೆ ಡಿಸಿಪಿಯಾಗಿದ್ದ ಆರ್.ಎನ್.ಬಿಂದುಮಣಿ ಅವರನ್ನು ಕೊಡುಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಅವರ ಸ್ಥಾನಕ್ಕೆ ಯಾರನ್ನೂ ನಿಯೋಜಿಸಿರಲಿಲ್ಲ. 77 ದಿನಗಳ ನಂತರ ಹೊಸ ಡಿಸಿಪಿ ನಿಯೋಜಿಸಲಾಗಿದೆ.

