ಮೈಸೂರು: ನಂಜನಗೂಡು ತಾಲೂಕು, ಗಟ್ಟವಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪಂಚಮುಖಿ ಆಂಜನೇಯ ಹಾಗೂ ಲಕ್ಷ್ಮೀನರಸಿಂಹ ಮೂರ್ತಿಗಳು ಇಂದು ಮೈಸೂರಿನ ಶ್ರೀ ಗಣಪತಿ ಆಶ್ರಮಕ್ಕೆ ತಲುಪಿದವು
ಕಂಚಿಯಲ್ಲಿ ಸಿದ್ಧವಾದ 6 ಅಡಿ ಎತ್ತರದ ಲಕ್ಷ್ಮೀನರಸಿಂಹ ಹಾಗೂ ಕೋಲಾರದ ಮಾಲೂರಿನಲ್ಲಿ ಸಿದ್ಧವಾದ 5.5 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹಗಳು ಗಟ್ಟವಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪುವ ಮುನ್ನ ಗಣಪತಿ ಆಶ್ರಮಕ್ಕೆ ಆಗಮಿಸಿದವು.
ದತ್ತಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿಗಳು ವಿಗ್ರಹಗಳಿಗೆ ವಿಶೇಷ ಪೂಜೆ ನೆರವೇರಿಸಿ ಗಟ್ಟವಾಡಿ ಗ್ರಾಮಕ್ಕೆ ಬೀಳ್ಕೊಟ್ಟರು.
ಮಾರ್ಗಮಧ್ಯೆ ಮೂರ್ತಿಗಳಿಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ನೆರವೇರಿದ ನಂತರ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ತಲುಪಲಿದೆ.
ವಿಶೇಷ ಪೂಜೆ ವೇಳೆ ದತ್ತ ವಿಜಯಾನಂದ ಶ್ರೀಗಳೊಂದಿಗೆ ಶಾಸಕ ಶ್ರೀವತ್ಸ ಸಹ ಹಾಜರಿದ್ದರು.

