ಮೈಸೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಶಾಸಕ ತನ್ವೀರ್ ಸೇಠ್ ನಾಯಕರ ವಿರುದ್ಧ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆಸೆ ನಿರಾಸೆಯಾಗಿದೆ, ಹೈಕಮಾಂಡ್ ನೀಡಿದ್ದ ಭರವಸೆ ಹುಸಿಯಾಗಿದೆ. ನನ್ನ ಮುಂದಿನ ನಡೆ ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿ ಸಿದರು.
ರಾಹುಲ್ ಗಾಂಧಿ ಕುರಿತು ಹೇಳಲಾದ ಒಂದೇ ಒಂದು ಪದಕ್ಕೆ ರಾಜಣ್ಣ ಅವರು ಸ್ಥಾನ ಕಳೆದುಕೊಂಡರು. ಆದರೆ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದ ವರ ವಿರುದ್ಧ ಯಾವುದೇ ಕ್ರಮವಾಗಲಿಲ್ಲ ಎಂದು ಬೇಸರಪಟ್ಟರು.
ಜಮೀರ್ ಅಹ್ಮದ್ ಮಾತ್ರವಲ್ಲ, ಹಲವರು ಪಕ್ಷದ ವರ್ಚಸ್ಸನ್ನು ಕಡೆಗಣಿಸಿದ್ದಾರೆ ಎಂದು ಹೇಳಿದರು.
ದೆಹಲಿಗೆ ಹೋಗಿ ಲಾಬಿ ಮಾಡಲಿಲ್ಲ, ಈಗಲೂ ಮಾಡುವುದಿಲ್ಲ. ಪಕ್ಷ ನಮ್ಮನ್ನು ಕಡೆಗಣಿಸಿದೆ. ನನ್ನ ಅವಕಾಶ ತಪ್ಪಲು ರಾಜ್ಯದ ಕೆಲ ನಾಯಕರ ಕೈವಾಡ ವಿದೆ. ಹೈಕಮಾಂಡ್‌ನಿಂದ ನನಗೆ ಯಾವುದೇ ಅನ್ಯಾಯವಾಗಿಲ್ಲ, ತಪ್ಪು ರಾಜ್ಯ ನಾಯಕರಿಂದಾಗಿದೆ. ಯಾರಿಂದ ಅವಕಾಶ ತಪ್ಪಿದೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ ಎಂದು ತನ್ವೀರ್ ಸೇಠ್ ಹೇಳಿ ದರು.
ಯಾವುದೇ ನಿಗಮ-ಮಂಡಳಿ ಸ್ಥಾನವೂ ಬೇಡ ಎಂದು ಹೇಳಿದ್ದೆ. ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಆ ವಿಶ್ವಾಸವನ್ನು ಪಕ್ಷವೇ ಹುಸಿಗೊಳಿಸಿದೆ. ನಮ್ಮ ಜಿಲ್ಲೆ ಯವರೇ ಮುಖ್ಯಮಂತ್ರಿ ಆಗಿರುವ ಕಾರಣ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗಲೂ ಮೌನವಾಗಿದ್ದೆ ಎಂದು ಬೇಸರದಿಂದಲೇ ನುಡಿದರು.
ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಮಾತ ನಾಡುವುದಿಲ್ಲ. ಅದಕ್ಕೂ ಒಂದು ಕಾಲ ಬರು ತ್ತದೆ. ನನ್ನ ಕೋಪ, ನೋವು ಮತ್ತು ಬೇಸರವನ್ನು ಯಾವುದೇ ಪದಗಳಲ್ಲಿ ವ್ಯಕ್ತಪಡಿಸದೆ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಉಳಿದಿದ್ದೇನೆ ಎಂದು ಹೇಳಿ ದರು.
ಮೈಸೂರು ನಗರ ಹಾಗೂ ಜಿಲ್ಲೆಗೆ ಸೇವೆ ಮಾಡುವ ಅವಕಾಶ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಅಭಿಮಾನಿಗಳು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಪಕ್ಷದ ಮೇಲೆ ಇದ್ದ ನಂಬಿಕೆ ಕುಸಿದಿದೆ ಎಂದು ತಿಳಿಸಿದರು.
ರಾಜಕಾರಣದ ಮೌಲ್ಯಗಳ ಮೇಲೂ ಪ್ರಶ್ನೆ ಎತ್ತಿದ ತನ್ವೀರ್ ಸೇಠ್, ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುತ್ತಾಳೆ ಎಂಬ ಪರಿಸ್ಥಿತಿ ರಾಜಕಾರಣದಲ್ಲೂ ಬಂದಿದೆಯೇ ಎಂಬ ಅನುಮಾನ ಮೂಡಿದೆ. ರಾಜ ಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

