ಸಿದ್ದರಾಮಯ್ಯನವರು ಯಾವ ನಾಯಿ ಎಂದು ತಿಳಿಸಲಿ -ಹೆಚ್.ವಿಶ್ವನಾಥ್

ಮೈಸೂರು: ಸಿದ್ದರಾಮಯ್ಯನವರು ಯಾವ ನಾಯಿ ಎಂದು ತಿಳಿಸಲಿ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ವಿಶ್ವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿದರೆ ಬಿಜೆಪಿ ಸೇರಿದ ಶಾಸಕರದ್ದು ನಾಯಿಪಾಡು ಎಂದು ಸಿದ್ದರಾಮಯ್ಯನವರು ಹೇಳಿದ್ದಾರಾಲ್ಲ ಎಂಬ ಪ್ರಶ್ನೆಗೆ ವಿಶ್ವನಾಥ್ ಪ್ರತಿಕ್ರಿಯಿಸಿದರು.
ಜೆಡಿಎಸ್ ಪಕ್ಷದಿಂದ ಬಂದಾಗ ಸಿದ್ದರಾಮಯ್ಯನವರು ಯಾವ ನಾಯಿಯಾಗಿದ್ದರು ಎಂದರು.
5 ವರ್ಷ ಆಡಳಿತ ನಡೆಸಿ ಅಭಿವೃದ್ಧಿ ಕೆಲಸ ಮಾಡಿ 35 ಸಾವಿರ ಅಂತರದಿಂದ ಸೋತು ಬದಾಮಿಗೆ ಓಡಿ ಹೋಗಿದ್ದ ಸಿದ್ದು ಯಾವ ನಾಯಿ ಎಂದು ತಿಳಿಸಲಿ ಎಂದರು ವಿಶ್ವನಾಥ್.
ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಡುವುದನ್ನು ಸಿದ್ದರಾಮಯ್ಯ ನಿಲ್ಲಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೆಚ್ ವಿಶ್ವನಾಥ್ ಹೇಳಿದರು.