ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಫುಲ್ಲಾ ಮೀರ್ ನನ್ನು ಭಾರತೀಯ ಭದ್ರತಾ ಪಡೆಗಳು ಹತ್ಯೆಗೈದಿದೆ.
ಶ್ರೀನಗರದ ಹೊರವಲಯದ ರಂಗ್ರೆತ್ ಎಂಬಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಫುಲ್ಲಾ ಮೀರ್ ನನ್ನು ಕೊಂದು ಹಾಕಲಾಗಿದೆ. ಮತ್ತೊಬ್ಬ ಉಗ್ರನನ್ನು ಭದ್ರತಾ ಪಡೆಗಳು ಜೀವಂತವಾಗಿ ಸೆರೆ ಹಿಡಿದಿವೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಸಫೀವುಲ್ಲಾನನ್ನ ಎ ಕೆಟಗರಿ ಉಗ್ರನೆಂದು ಪರಿಗಣಿಸಲಾಗಿತ್ತು. ಮೇ ತಿಂಗಳಲ್ಲಿ ರಿಯಾಜ್ ನಾಯ್ಕೂ ಹತ್ಯೆಯಾದ ಬಳಿಕ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸಫೀವುಲ್ಲಾ ನೇತೃತ್ವ ವಹಿಸಿಕೊಂಡಿದ್ದ ಎನ್ನಲಾಗಿದೆ.
ಮೋಸ್ಟ್ ವಾಂಟೆಡ್ ಉಗ್ರರಲ್ಲೊಬ್ಬನಾಗಿದ್ದ ಸೈಫುಲ್ಲಾ ಶ್ರೀನಗರದ ಹೊರವಲಯಕ್ಕೆ ಬಂದಿದ್ಧಾನೆಂಬ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರನೆ ನಡೆಸಲಾಗಿ ಆಗ ಉಗ್ರರು ಗುಂಡಿನ ದಾಳಿ ನಡೆಸಿದ್ಧಾರೆ. ಗುಂಡಿನ ಕಾಳಗದಲ್ಲಿ ಸೈಫುಲ್ಲಾ ಹತ್ಯೆಯಾಗಿದ್ದಾನೆ.
ಸೈಫುಲ್ಲಾ ಎನ್ ಕೌಂಟರ್ ಆದ ಸ್ಥಳದಲ್ಲಿ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಿಜ್ಬುಲ್ ಮುಖ್ಯಸ್ಥ ಮೀರ್ ಸೈಫುಲ್ಲಾ ಹತ್ಯೆ

