ನವದೆಹಲಿ: ಅಶೋಕ್ ಗಸ್ತಿಯವರಿಂದ ತೆರವಾದ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ ದಿನಾಂಕವನ್ನು ನಿಗಧಿಗೊಳಿಸಲಾಗಿದೆ.
ಇದೇ ಡಿ. 1ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆಯೂ ನಡೆಯಲಿದೆ.
ಅಶೋಕ್ ಗಸ್ತಿ ಅವರಿಂದ ತೆರವಾದ ಕರ್ನಾಟಕದ ಒಂದು ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿ, ಚುನಾವಣಾ ಕಾರ್ಯದಲ್ಲಿ ಭಾಗವಹಸಿಸುವ ಎಲ್ಲರೂ ಫೇಸ್ ಮಾಸ್ಕ್ ಧರಿಸಬೇಕು ಎಂದು ಆಯೋಗ ಸೂಚಿಸಿ ಕೋವಿಡ್ ನಿಯಮ ಪಾಲಿಸುವಂತೆ ತಿಳಿಸಿದೆ.
ಬಿಜೆಪಿ ಮುಖಂಡರಾದ ಗಸ್ತಿ ಅವರು ಜುಲೈನಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕೋವಿಡ್ ನಿಂದ ಸೆ. 17ರಂದು ನಿಧನರಾದರು.
ಅಶೋಕ್ ಗಸ್ತಿಯವರಿಂದ ತೆರವಾದ ರಾಜ್ಯಸಭೆ ಸ್ಥಾನಕ್ಕೆ ಚುನಾವಣೆ

