ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಗೆ ಮೋದಿ ಅಭಿನಂದನೆ

ನವದೆಹಲಿ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿರುವ ಜೋ ಬೈಡನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಜೋ ಬೈಡನ್ ನಿಮ್ಮ ಅದ್ಭುತ ಗೆಲುವಿಗೆ ಅಭಿನಂದನೆಗಳು! ಭಾರತ -ಅಮೆರಿಕಾ ಸಂಬಂಧಗಳನ್ನು ಬಲಪಡಿಸುವಲ್ಲಿ ನಿಮ್ಮ ಕೊಡುಗೆ ನಿರ್ಣಾಯಕವಾದುದು ಮತ್ತು ಅಮೂಲ್ಯವಾದುದು. ಭಾರತ-ಅಮೆರಿಕಾ ಸಂಬಂಧಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು, ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಅಮೆರಿಕಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೆ ಪ್ರಧಾನಿ ಅಭಿನಂದಿಸಿದ್ದಾರೆ.
ಹೃತ್ಪೂರ್ವಕ ಅಭಿನಂದನೆಗಳು ಕಮಲಾ ಹ್ಯಾರಿಸ್! ನಿಮ್ಮ ಯಶಸ್ಸು ಪ್ರವರ್ತಕವಾದುದು. ಇದು ನಿಮ್ಮ ಚಿತ್ತಿಯವರಿಗೆ ಮಾತ್ರವಲ್ಲ, ಎಲ್ಲಾ ಭಾರತೀಯ-ಅಮೆರಿಕನ್ನರಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ. ನಿಮ್ಮ ಬೆಂಬಲ ಮತ್ತು ನಾಯಕತ್ವದಿಂದ ಭಾರತ-ಅಮೆರಿಕಾದ ಸಂಬಂಧಗಳು ಮತ್ತಷ್ಟು ಬಲವಾಗುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.