ಮೈಸೂರು: ನಾವು ಯಾರನ್ನು ವಿರೋಧ ಮಾಡಿ ಬಂದ್ವಿ, ಅವರೇ ಈಗ ಬಿಎಸ್‍ವೈ ಸ್ನೇಹಿತರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.
ನಗರದಲ್ಲಿ ಬುಧವಾರ ವಿಶ್ವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾವು ವಿರೋಧಿಸಿದವರೇ ಈಗ ಅವರ ಸ್ನೇಹಿತರಾಗಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.
ತಂದೆಯನ್ನ ಕೊಂದವನನ್ನೆ ತಾಯಿ ಮದುವೆ ಆದಂತಾಗಿದೆ ಎಂದು ವಿಶ್ವನಾಥ್ ಮಾರ್ಮಿಕವಾಗಿ ಹೇಳಿ, ಶೇಕ್ಸ್‍ಪಿಯರ್ ನಾಟಕದಲ್ಲಿ ಇದೇ ರೀತಿಯ ಪ್ರಸಂಗ ಇದೆ. ನಮ್ಮ ಪರಿಸ್ಥಿತಿ ಹಾಗೇ ಇದೆ ಎಂದರು.
ಸಿ.ಪಿ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡೋಕೆ ಅರ್ಜೆಂಟ್ ಯಾಕೇ? ಎಂದು ಅವರು ಪ್ರಶ್ನಿಸಿ, ಅವರೇನು ಸರ್ಕಾರ ಬಿಳಿಸೋಕೆ ಕಾರಣರಾದವರೇ? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ? ಮುಂಬೈ, ಪುಣೆಯಲ್ಲಿ ಸೂಟ್‍ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನ ಮಂತ್ರಿ ಮಾಡೋಕೆ ಅರ್ಜೆಂಟ್ ಯಾಕೇ ಎಂದರು.
ಬಿಜೆಪಿ ಸರ್ಕಾರ ಬರೋದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು ಎಂದು ವಿಶ್ವನಾಥ್ ಪ್ರಶ್ನೆ ಆಗಿದೆ.
ಯತ್ನಾಳ್ ಅಥವಾ ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರನ್ನು ಮಂತ್ರಿ ಮಾಡಿ ಎಂದರು.
ಸರ್ಕಾರದ ರಚನೆ ಸಂದರ್ಭದಲ್ಲಿ ಬಿಎಸ್‍ವೈ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ. ಇಂದಿನ ಬಿಎಸ್‍ವೈ ನಡವಳಿಕೆಗಳೇ ಬೇರೆ. ರಾಜಕಾರಣದಲ್ಲಿ ಕೃತಜ್ಞತೆ ಕಡಿಮೆ ಆಗುತ್ತಿದೆ ಎಂದು ಅವರು ಹೇಳಿದರು.
ನಾವು ಯಾರನ್ನು ವಿರೋಧ ಮಾದ್ವಿ ಅವರೇ ಬಿಎಸ್‍ವೈ ಸ್ನೇಹಿತರು -ಹೆಚ್. ವಿಶ್ವನಾಥ್

