ಬೆಂಗಳೂರು: ಕಾಂಗ್ರೆಸ್ ನಂತೆ ನಾವು ಡಬಲ್ ಗೇಮ್ ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.
ಹೆಚ್ ಡಿಕೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದರು.
ಕಾಂಗ್ರೆಸ್ ನಂತೆ ನಾವು ದ್ವಿಮುಖ ಧೋರಣೆ ಹೊಂದಿಲ್ಲ ಎಂದ ಅವರು ಈಗ ಕಾಂಗ್ರೆಸ್ ಶಾಲು ಹೊದ್ದುಕೊಂಡರೆ ಬೆಲೆಯಿಲ್ಲ ಎಂದರು.
ನಾನು ಹಗಲು ಹೊತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ಆದರೆ ಸಿದ್ದರಾಮಯ್ಯ ಮಧ್ಯರಾತ್ರಿ ಭೇಟಿಯಾಗಿದ್ದರು. ಸಿದ್ದರಾಮಯ್ಯ ಅವರ ಶಿಷ್ಯರನ್ನು ಬಿಜೆಪಿಗೆ ಕಳಿಸಿದ್ದು ಯಾಕೆ ಎಂಬುದು ಅವರಿಗಷ್ಟೇ ಗೊತ್ತಿರಬೇಕು ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ ಸಂದರ್ಭದಲ್ಲಿ ಒಬ್ಬ ರೈತ ಮುಖಂಡರು ಸಹ ನನ್ನ ಪರ ಮಾತನಾಡಲಿಲ್ಲ ಎಂದು ಹೇಳಿದ ಹೆಚ್ ಡಿಕೆ ರೈತ ಮುಖಂಡರ ಧೋರಣೆ ಖಂಡನೀಯ ಎಂದರು.
ರೈತ ಮುಖಂಡರಿಂದ ನಾನು ಏನನ್ನು ಹೇಳಿಸಿಕೊಳ್ಳಬೇಕಿಲ್ಲ. ಜೆಡಿಎಸ್ ರೈತರಿಗಾಗಿಯೇ ಮೀಸಲಾಗಿದೆ. ಮುಂದೆಯು ರೈತರ ಪರ ಇರುತ್ತದೆ ಎಂದರು.
ಭೂ ಸುಧಾರಣೆ ಮಸೂದೆ ತಂದಾಗ ಮೊದಲಿಗೆ ತಾವು ದೇವೇಗೌಡರು ವಿರೋಧಿಸಿದ್ದು ನಿಜ. ಕಳೆದ ಅಧಿವೇಶನದಲ್ಲಿ ಕೆಲ ಬದಲಾವಣೆ ತರಲು ಸಲಹೆ ನೀಡಿದ್ದೇವು. ತಮ್ಮ ಸಲಹೆಯನ್ನು ಸರ್ಕಾರ ಪರಿಗಣಿಸಿ ಪರಿಷ್ಕರಣೆ ಮಾಡಿದೆ ಹಾಗಾಗಿ ಮಸೂದೆ ಬೆಂಬಲಿಸಬೇಕಾಯಿತು ಎಂದು ಕುಮಾರಸ್ವಾಮಿ ತಿಳಿಸಿದರು.
ಕಾಂಗ್ರೆಸ್ ನಂತೆ ಡಬಲ್ ಗೇಮ್ ರಾಜಕೀಯ ಮಾಡುವುದಿಲ್ಲ -ಹೆಚ್.ಡಿ.ಕೆ

