ಮೈಸೂರು: ಟೀಕೆ ಮಾಡುವವರಿಗೆ ಬಜೆಟ್ ಉತ್ತರ ಆಗಲಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸಿಎಂ ಬಿಎಸ್ ವೈ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ವಿಪಕ್ಷಗಳು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಸಿಎಂ ಉತ್ತರಿಸಿ, ಟೀಕೆ ಮಾಡುವವರಿಗೆ ಬಜೆಟ್ ಉತ್ತರ ಆಗಲಿದೆ ಎಂದರು.
ಮೈಸೂರು ಏರ್‍ಪೆÇೀರ್ಟ್ ಅಗಲೀಕರಣಕ್ಕೆ ಆದ್ಯತೆ ನೀಡುವ ಉದ್ದೇಶವಿದೆ. ಆದರೆ ಈಗಲೇ ಈ ಕುರಿತ ಏನನ್ನು ಹೇಳುವುದಿಲ್ಲ ಬಜೆಟ್ ನಂತರ ನಿಮಗೆ ತಿಳಿಯಲಿದೆ ಎಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಹೇಳಿದರು.
ಮೀಸಲಾತಿ ಹೋರಾಟ ಕುರಿತು ಕೇಳಲಾದ ಪ್ರಶ್ನೆಗೆ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರಿಗೂ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ಸವಾಲುಗಳು ಬಂದಾಗ ಖುಷಿ ಆಗುತ್ತೆ. ಬಹಳ ಹುಮ್ಮಸ್ಸಿನಿಂದಲೇ ಅವುಗಳನ್ನು ಎದುರಿಸುತ್ತೇನೆ ಎಂದು ಹೇಳಿದರು.
ಟೀಕೆ ಮಾಡುವವರಿಗೆ ಬಜೆಟ್ ಉತ್ತರ ಆಗಲಿದೆ -ಸಿಎಂ ಬಿಎಸ್ ವೈ

