ಬೆಂಗಳೂರು: ಎರಡನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿರುವುದರಿಂದ ಯುಗಾದಿ ಹಬ್ಬಕ್ಕಾಗಲಿ ಇಲ್ಲವೇ ರಂಜಾನ್ ಆಚರಣೆಗಾಗಲಿ ಇಲ್ಲವೇ ಇನ್ನಾವುದೇ ಕಾರಣಕ್ಕಾಗಿ ಆಗಲಿ ಕೋವಿಡ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾರ್ಗಸೂಚಿಯಲ್ಲಿ ಯಾವುದೇ ವಿನಾಯಿತಿಯನ್ನೂ ಕೊಡಲು ಸಾಧ್ಯವಿಲ್ಲ ಎಂದರು.
ದಿನದಿಂದ ದಿನಕ್ಕೆ ಆತಂಕದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಕಳೆದ ಬುಧವಾರ ಒಂದೇ ದಿನ ಬೆಂಗಳೂರಿನಲ್ಲಿ 5 ಸಾವಿರ ಸೇರಿ ರಾಜ್ಯದಲ್ಲಿ ಒಟ್ಟು 7 ಸಾವಿರ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು ಎಂದರು.
ಹಾಗಾಗಿ ಯಾವುದೇ ಹಬ್ಬಕ್ಕೂ ರಿಯಾಯಿತಿ ನೀಡುವುದಿಲ್ಲ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು.
ಯುಗಾದಿ ಅಥವಾ ರಂಜಾನ್ ವೇಳೆಯಲ್ಲಿ ಮಾರ್ಗಸೂಚಿಯಲ್ಲಿ ಬದಲಾವಣೆ -ಇಲ್ಲ ಸಚಿವ ಡಾ.ಕೆ.ಸುಧಾಕರ್

