ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಕೆಲ ಸಚಿವರಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಜವಾಬ್ದಾರಿವಹಿಸಿದ್ದಾರೆ.
ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ನಡೆಸಲಾದ ಸಂಪುಟ ಸಭೆ ನಂತರ ಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರೆಮಿಡಿಸಿವಿರ್ ಔಷಧ ಸರಬರಾಜು ಅಶ್ವತ್ಥ್ ನಾರಾಯಣ್, ಜಗದೀಶ್ ಶೆಟ್ಟರ್‍ಗೆ ಆಕ್ಸಿಜನ್ ವ್ಯವಸ್ಥೆ, ಬೆಡ್ ವ್ಯವಸ್ಥೆ ಜವಾಬ್ದಾರಿ ಇಂಧನ ಸಚಿವ ಆರ್‍ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಯಿಗೆ ವಹಿಸಲಾಗಿದೆ. ವಾರ್ ರೂಮ್ ಕಾಲ್ ಸೆಂಟರ್ ನಿರ್ವಹಣೆಯನ್ನು ಅರವಿಂದ್ ಲಿಂಬಾವಳಿಗೆ ನೀಡಲಾಗಿದೆ.
ನಾಳೆಯೇ ಉಸ್ತುವಾರಿ ಸಚಿವರು ಸ್ಥಳದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಿಎಂ ತಾಕೀತು ಮಾಡಿದ್ದಾರೆ.
ಕೋವಿಡ್ ನಿರ್ವಹಣೆ ಜವಾಬ್ದಾರಿ ಸಚಿವರಿಗೆ ವಹಿಸಿದ ಸಿಎಂ

