ಕೊರೊನಾ 3ನೇ ಅಲೆ ಅನಿವಾರ್ಯ -ಕೇಂದ್ರ ಪ್ರಧಾನ ವೈಜ್ಞಾನಿಕ ಸಲಹೆಗಾರ ಎಚ್ಚರಿಕೆ

ನವದೆಹಲಿ: ಕೋವಿಡ್ 2ನೇ ಅಲೆಯಿಂದ ದೇಶದ ಜನತೆ ತತ್ತರಿಸುತ್ತಿರುವಾಗ 3ನೇ ಅಲೆ ಅನಿವಾರ್ಯ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಘವನ್ ನೀಡಿದ್ದಾರೆ.
ಆದರೆ ಈ ಹಂತ ಯಾವ ಸಮಯ ಹಾಗೂ ಯಾವ ಪ್ರಮಾಣದಲ್ಲಿ ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದವರು ಹೇಳಿದ್ದಾರೆ.
3ನೇ ಅಲೆಯಿಂದ ವೈರಸ್ ಮತ್ತಷ್ಟು ರೂಪಾಂತರವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಲೆಗಳು ಬರುವ ಸಾಧ್ಯತೆ ಇವೆ ಎಂದು ಅವರು ತಿಳಿಸಿದ್ದಾರೆ.
ಲಭ್ಯವಿರುವ ಲಸಿಕೆ ಪ್ರಸ್ತುತ ರೂಪಾಂತರಿ ವೈರಸ್ ವಿರುದ್ದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು, ಹೊಸ ರೀತಿಯ ವೈರಸ್ ಗಳನ್ನು ಎದುರಿಸಲು ಲಸಿಕೆ ಸಂಶೋಧನೆಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ವಿಜಯರಾಘವನ್ ತಿಳಿಸಿದ್ದಾರೆ.