ಟೌಟೆ ಚಂಡಮಾರುತ ಎದುರಿಸಲು ಸಾವಿರ ಸಿಬ್ಬಂದಿ ನೇಮಕ -ಬಸವರಾಜ ಬೊಮ್ಮಾಯಿ

ಬೆಂಗಳೂರು: ಟೌಟೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಲುಎನ್ ಡಿ ಆರ್ ಎಫ್, ಎಸ್ ದಿ ಆರ್ ಎಫ್ ಸೇರಿದಂತೆ ಒಟ್ಟು ಒಂದು ಸಾವಿರ ನುರಿತ ರೆಸ್ಕ್ಯೂ ಆಪರೇಷನ್ ಟೀಮ್ ಅನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಟೌಟೆ ಚಂಡಮಾರುತ ಎದುರಿಸಲು ಮಾಡಿಕೊಳ್ಳಲಾಗಿರುವ ಸಿದ್ಧತೆಗಳ ಕುರಿತು ಉನ್ನತಮಟ್ಟದ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಗೃಹ ಸಚಿವರು ಈ ವಿಷಯ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 434 ಮಂದಿ ಎಸ್ ದಿ ಆರ್ ಎಫ್ ತಂಡದಲ್ಲಿದ್ದಾರೆ. ಕಲಬುರ್ಗಿ ಮತ್ತು ಬೆಂಗಳೂರುನಲ್ಲಿ ಇರುವ ಎಸ್ ದಿ ಆರ್ ಎಫ್ ಸಿಬ್ಬಂದಿಯನ್ನು ಉಡುಪಿಗೆ ಕಳಿಸಲಾಗುವುದು. ಮಂಗಳೂರಿನಲ್ಲಿ ಎನ್ ಡಿಆರ್ ಎಫ್ ತಂಡ ಇದೆ. ಇದರ ಜೊತೆಗೆ ಅಗ್ನಿಶಾಮಕ, ಪೆÇಲೀಸ್, ಗೃಹರಕ್ಷಕ, ಕರಾವಳಿ ಕಾವಲು ಪಡೆ ಸೇರಿದಂತೆ ಒಟ್ಟು 1000 ಜನ ನುರಿತ ರೆಸ್ಕ್ಯೂ ಆಪರೇಟರ್ ಗಳನ್ನು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ. ಚಂಡಮಾರುತ ಅನ್ನು ಸರ್ವರೀತಿಯಲ್ಲಿ ಎದುರಿಸಲು ಈ ತಂಡ ಸಿದ್ಧವಾಗಿದೆ. ಇದಕ್ಕೆ ಈಗಾಗಲೇ ಸಾಕಷ್ಟು ತರಬೇತಿಯನ್ನು ನೀಡಲಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.