ನವದೆಹಲಿ: ಚಿಪೆÇ್ಕ ಚಳವಳಿ ನಾಯಕ ಸುಂದರಲಾಲ್ ಬಹುಗುಣ (94) ಅವರು ಕೋವಿಡ್-19ನಿಂದಾಗಿ ನಿಧನರಾಗಿದ್ದಾರೆ.
ಸುಂದರಲಾಲ್ ಬಹುಗುಣ ಅವರು ರಿಷಿಕೇಶ್ ನ ಏಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಕೋವಿಡ್ ದೃಢಪಟ್ಟ್ ಹಿನ್ನೆಲೆಯಲ್ಲಿ ಸುಂದರಲಾಲ್ ಬಹುಗುಣ ಅವರನ್ನು ಮೇ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಆರೋಗ್ಯದಲ್ಲಿ ಏರುಪೇರಾಗಿ ಆಮ್ಲಜನಕ ಮಟ್ಟ ಕುಸಿದ ಕಾರಣ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸೊಂದಿಸದೇ ಅವರು ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
ಅರಣ್ಯ ನಾಶ ಆಗುತ್ತಿರುವುದನ್ನು ತಡೆಯಲೆಂದು 1973ರಲ್ಲಿ ಚಿಪೆÇ್ಕ ಚಳವಳಿರನ್ನು ಸುಂದರಲಾಲ್ ಬಹುಗುಣ ಅವರು ಆರಂಭಿಸಿದ್ದರು.

