ಕೊರೊನಾ ನಿಯಂತ್ರಣಕ್ಕೆ ಹೋಮ ಮಾಡಿಸಿದ ಬಿಜೆಪಿ ಶಾಸಕ

ಬೆಳಗಾವಿ: ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ವಾತಾವರಣ ಶುದ್ಧಿ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ, ಹವನ ಮಾಡಿಸಿದ್ದಾರೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಬಡಾವಣೆಯಲ್ಲಿ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಹೋಮ, ಹವನ ಕಾರ್ಯ ನಡೆಸಲಾಗಿದೆ.
ಕ್ಷೇತ್ರದ ಪ್ರತಿ ಮನೆಗಳ ಬಳಿ ಅಗ್ನಿಕುಂಡ ಸ್ಥಾಪನೆ, ಅಗ್ನಿಕುಂಡದಲ್ಲಿ ಭರಣಿ, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ, ಅಕ್ಕಿ, ಕವಡಿ ಧೂಪ ಹಾಗೂ ಲವಂಗ ಹಾಕಿ ಹೋಮ ಮಾಡಲಾಗಿದೆ.
ಹೋಮ ಹವನದಿಂದ ವಾತಾವರಣ ಶುದ್ಧಿಯಾಗಿ ಸೋಂಕು ನಿವಾರಣೆ ಆಗಲಿದೆ ಎಂಬ ನಂಬಿಕೆಯಿಂದ ಹೋಮ ಮಾಡಲಾಗಿದೆ. ಜೂ. 15ರ ವರೆಗೆ ಕ್ಷೇತ್ರದ ಎಲ್ಲ ಬಡಾವಣೆಯಲ್ಲಿ ಹೋಮ ಮಾಡಲಾಗುವುದು ಎಂದು ಅಭಯ ಪಾಟೀಲ್ ತಿಳಿಸಿದ್ದಾರೆ.