ಬೆಂಗಳೂರು: ನನ್ನ ಮುಂದೆ ಇರೋದು ಕೋವಿಡ್ ನಿರ್ವಹಣೆ ಮಾತ್ರ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪನವರು ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೊರೊನಾ ಬಿಕ್ಕಟ್ಟಿನ ನಡುವೆ ಸಿಎಂ ಬದಲಾವಣೆ ಮಾತು ಕೇಳಿ ಬರುತ್ತಿದೆಯಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಬಿ.ಎಸ್ ಯಡಿಯೂರಪ್ಪನವರು ಪ್ರತಿಕ್ರಿಯಿಸಿ, ನನ್ನ ಮುಂದೆ ಇರೋದು ಕೋವಿಡ್ ನಿರ್ವಹಣೆ. ಇದು ಮಾತ್ರ ನನ್ನ ಆಯ್ಕೆ. ದೆಹಲಿಗೆ ಯಾರೋ ಹೋಗಿ ಬಂದರೋ, ಅದು ನನಗೆ ಗೊತ್ತಿಲ್ಲ. ಸಾವು-ನೋವು ಜಾಸ್ತಿ ಆಗ್ತಿದೆ. ಅದನ್ನ ತಡೆಯೋ ಕೆಲಸ ಮಾಡಬೇಕು. ಎಲ್ಲರೂ ಒಟ್ಟಾಗಿ ಹೋರಾಡುವುದು ಈಗ ಅನಿವಾರ್ಯವಾಗಿದೆ ಎಂದು ಹೇಳಿದರು.
ಶಾಸಕಾಂಗ ಸಭೆ ಕುರಿತು ಕೇಳಲಾದ ಪ್ರಶ್ನೆಗೆ ಸಿಎಂ ಉತ್ತರಿಸಿ, ನಿಮ್ಮ ಮುಂದೆ ಹೇಳೋ ವಿಚಾರವಲ್ಲ ಎಂದರು.
ನಾಯಕತ್ವ ಬದಲಾವಣೆ ಚರ್ಚೆ ಈಗ ಅಪ್ರಸ್ತುತ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ವಿರೋಧ ಇದೆ. ಕೇಂದ್ರದ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ಸಿದ್ದವಿದೆ. ಯಡಿಯೂರಪ್ಪನವರೇ ಮುಂದುವರೆಯಬೇಕು ಎಂದು ಕೇಂದ್ರದ ನಾಯಕರ ಬಳಿ ಹೇಳುತ್ತೇವೆ ಎಮದು ಬಿಜೆಪಿಯ ಕೆಲ ಸಚಿವರು ಹೇಳಿದ್ದಾರೆ.
ಕೊರೋನಾ ಹತೋಟಿಗೆ ತರಲು ಸಿಎಂ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಚರ್ಚೆ ಅಪ್ರಸ್ತುತ ಎಂದು ಹಲವು ಮಂದಿ ಬಿಜೆಪಿ ಶಾಸಕರು, ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನ್ನ ಮುಂದೆ ಇರೋದು ಕೋವಿಡ್ ನಿರ್ವಹಣೆ ಮಾತ್ರ -ಸಿಎಂ ಯಡಿಯೂರಪ್ಪ

