ಮೈಸೂರು ಜಿಲ್ಲಾಡಳಿತ ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ -ಶಾಸಕ ಸಾ.ರಾ.ಮಹೇಶ್

ಮೈಸೂರು: ಮೈಸೂರು ಜಿಲ್ಲಾಡಳಿತ ಕೊರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಶಾಸಕ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದರು.
ನಗರದಲ್ಲಿನ ತಮ್ಮ ಕಛೇರಿಯಲ್ಲಿ ಸೋಮವಾರ ಶಾಸಕ ಸಾ. ರಾ. ಮಹೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮೈಸೂರು ನಗರ ವ್ಯಾಪ್ತಿಯಲ್ಲಿ ಮೇ 1ರಿಂದ ಮೇ 29ರ ವರೆಗೆ 969 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕ ಕೊಟ್ಟಿದೆ. 731 ಸಾವುಗಳ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಸಾ.ರಾ. ಮಹೇಶ್ ಹೇಳಿ ಈ ಸಂಬಂಧ ದಾಖಲೆಯನ್ನು ಬಿಡುಗಡೆ ಮಾಡಿದರು.
ಕೋವಿಡ್‍ನಿಂದ ಮೃತಪಟ್ಟವರು 969 ಮಂದಿ. ಈ ಪೈಕಿ ಪ್ರತಿಯೊಬ್ಬರ ದಾಖಲೆಯು ಇದೆ. ಇದು ಕೇವಲ ಮೈಸೂರು ವ್ಯಾಪ್ತಿ. ಇನ್ನು ಮೈಸೂರು ಜಿಲ್ಲೆಯಾದ್ಯಂತ ಮತ್ತೆಷ್ಟು ಜನ ಸತ್ತಿದ್ದಾರೋ. ಮೇ 2ರಂದು ಇಬ್ಬರ ಸಾವು ಎಂದು ತೋರಿಸಿದ್ದೀರಿ, ಹಾಗಿದ್ದರೆ ಉಳಿದ 21 ಮಂದಿಯ ಸಾವು ಏನು? ಡೆತ್ ಸರ್ಟಿಫಿಕೇಟ್ ನಲ್ಲಿರೋ ಮಾಹಿತಿ ಸುಳ್ಳಾ? ಏನ್ ನಡೆಯುತ್ತಿದೆ ಮೈಸೂರಲ್ಲಿ ಎಂದು ಅವರು ಪ್ರಶ್ನೆ ಮಾಡಿದರು.
ಸಾವಿನ ಸಂಖ್ಯೆ ಹೆಚ್ಚಿದ್ದರು ಸಾವು ಇಳಿಮುಖ ಆಗಿದೆ. ಕೊರೊನಾ ಕಂಟ್ರೋಲ್ ಗೆ ಬರ್ತಿದೆ ಅಂತ ಫೆÇೀಸ್ ಕೊಡ್ತಿದ್ದಾರೆ. ನಿಮ್ಮ ಈ ಅಪರಾಧಕ್ಕೆ ಏನು ಶಿಕ್ಷೆ ಕೊಡಬೇಕು. ನಾನು ದಾಖಲೆಗಳ ಸಮೇತ ಮಾಹಿತಿ ಬಹಿರಂಗಪಡಿಸಿದ್ದೇನೆ. ಮೋಸದ ಅಂಕಿ ಅಂಶಗಳಿಂದ ಇಡೀ ಸರ್ಕಾರ ಹಾಗೂ ವ್ಯವಸ್ಥೆಯನ್ನೇ ವಂಚಿಸಿದ್ದಾರೆ. ಸತ್ತವರಿಗೂ ದ್ರೋಹ ಮಾಡಿದ್ದಾರೆಂದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಸರ್ಕಾರಕ್ಕೆ ಸುಳ್ಳು ಲೆಕ್ಕ ಹೋಗಿದೆ ಎಂದು ಗಂಭೀರವಾಗಿ ಆರೋಪಿಸಿದ ಅವರು ಯಾಕೆ ಸಾವುಗಳನ್ನು ಮುಚ್ಚಿಡುತ್ತಿದ್ದೀರಿ? ಮುಖ್ಯಕಾರ್ಯದರ್ಶಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೆಕ್ಕ ಕೊಡುತ್ತಿಲ್ಲ. ನಿಮಗೆ ಮಾನವೀಯತೆ, ಮನುಷ್ಯತ್ಯ, ತಾಯಿ ಹೃದಯ ಇಲ್ವಾ? ಸರ್ಕಾರವನ್ನೂ ಯಾಕೆ ದಿಕ್ಕು ತಪ್ಪಿಸುತ್ತಿದ್ದೀರಿ? ಇದು ಸತ್ತ ಕುಟುಂಬಸ್ಥರ ಮಾನವ ಹಕ್ಕುಗಳ ಉಲ್ಲಂಘನೆ ಅಲ್ವಾ? ಸತ್ಯ ವರದಿ ಮಾಡಿದ್ದರೆ ಮುಖ್ಯಮಂತ್ರಿ, ಸಚಿವರು ಅಥವಾ ಯಾರಾದರೂ ಮೈಸೂರಿಗೆ ಏನು ಕೆಲಸ ಆಗಬೇಕು ಅದನ್ನು ಮಾಡುತ್ತಿದ್ದರು ಎಂದರು.
ಈ ಎಲ್ಲ ದಾಖಲೆಗಳನ್ನೂ ನಾನು ಮಾನವ ಹಕ್ಕು ಆಯೋಗ, ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುತ್ತೇನೆ ಎಂದು ಅವರು ಹೇಳಿದರು.
ನಿಮ್ಮ ಮೋಸದ ಅಂಕಿ ಅಂಶಗಳ ಪ್ರಕಾರ ದೇಶದ ಕಾನೂನು, ಸಿಎಂ, ಉಸ್ತುವಾರಿಯನ್ನು, ಜನರನ್ನು ವಂಚಿಸಿರೋದು. ಸತ್ತ ಕುಟುಂಬಗಳಿಗೆ ಮಾಡಿರೋ ದ್ರೋಹ ಮಾಡಿದಂತಾಗಿದೆ ಎಮದು ಅವರು ತಿಳಿಸಿದರು.
ಸರ್ಕಾರ ಈಗಲಾದರೂ ಕಣ್ಣು ತೆರೆಯಲಿ. ರಾಜ್ಯಪಾಲರು ಈ ಉರಿತು ತನಿಖೆ ಮಾಡಿಸಬೇಕು ಎಂದು ಸಾ.ರಾ. ಮಹೇಶ್ ಒತ್ತಾಯಿಸಿದರು.
ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಹೇಗೆ ಕೆಲಸ ಮಾಡಿದರು ಅನ್ನೋ ಕಾರಣಕ್ಕೆ ಇವರು ಮೈಸೂರಿಗೆ ಸೂಕ್ತವಲ್ಲ ಅಂತ ನಾವು ಹೇಳಿದ್ದು. ಆರಂಭದಲ್ಲಿ ಮೈಸೂರು ಸಂಸದರು ಇವರನ್ನು ಸಮರ್ಥನೆ ಮಾಡುತ್ತಿದ್ದರು. ಈಗ ಜ್ಞಾನೋದಯವಾಗಿ ಅವರು ಧ್ವನಿ ಎತ್ತಿದ್ದಾರೆಂದರು.