ಅದ್ಯಾರೋ ಸಚಿವರು ಸ್ವಾಮೀಜಿ ಅವರಿಗೆ ಸಿಡಿ ತೋರಿಸಲು ಹೋಗಿ ಉಗಿಸಿಕೊಂಡವ್ರೆ -ಡಿ.ಕೆ. ಶಿವಕುಮಾರ್

ದಾವಣಗೆರೆ: ಅದ್ಯಾರೋ ಸಚಿವರು ಸ್ವಾಮೀಜಿ ಅವರಿಗೆ ಸಿಡಿ ತೋರಿಸಲು ಹೋಗಿ ಉಗಿಸಿಕೊಂಡಿದ್ದಾರೆ ಎಂದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿಕೆಶಿವಕುಮಾರ್ ಮಾತನಾಡಿರು.
ಅಧಿಕಾರಕ್ಕೋಸ್ಕರ ಅದ್ಯಾರೋ ಸಚಿವರು ಸ್ವಾಮೀಜಿಗೆ ತೋರಿಸಲು ಮೈಸೂರಿಗೆ ಸಿಡಿ ತಗೊಂಡು ಹೋಗಿದ್ರಂತೆ. ಸ್ವಾಮೀಜಿ ಆ ಸಚಿವರನ್ನು ಚೆನ್ನಾಗಿ ಬೈದು ಕಳಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಚಿವ ಸಿ.ಪಿ. ಯೋಗೇಶ್ವರ ಹೆಸರು ಪ್ರಸ್ತಾಪಿಸದೇ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿಡಿ ತೋರಿಸಲು ಮೈಸೂರಿಗೆ ಹೋಗಿದ್ದಂತಹ ಸಚಿವರಿಗೆ ಸ್ವಾಮೀಜಿ ಚೆನ್ನಾಗಿ ಬೈದು, ಉಗಿದು ಕಳಿಸಿದ್ದಾರೆ. ಸ್ವಾಮೀಜಿಗಳೊಬ್ಬರ ಬಳಿಗೆ ಸಿಡಿ ತಗೊಂಡು ಹೋಗಿದ್ದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಹೇಳುತ್ತಾರಲ್ಲಾ ಅದೇನೋ ಸಿ.ಡಿ ಇದೆ ಅಂತಾ. ಅದನ್ನೇ ಮೈಸೂರಿನಲ್ಲಿ ಸ್ವಾಮೀಜಿಗೆ ತೋರಿಸಲೆಂದು ಹೋಗಿದ್ರಂತೆ ಸಚಿವರು. ಹೂ ಅದೇ ಸಚಿವ ಯೋಗೇಶ್ವರ ಎಂದು ಅವರು ಹೇಳಿದರು.
ಎಲ್ಲಾ ಮಂತ್ರಿಗಳು ಏನು ಮಾಡುತ್ತಿದ್ದಾರೆ ಹೇಳಿ? ಎಲ್ಲಾ ಶಾಸಕರು ಏನು ಮಾಡುತ್ತಿದ್ದಾರೆ ಹೇಳಿ ನೋಡೋಣ. ಯಥಾ ರಾಜ, ತಥಾ ಪ್ರಜಾ ಎಂಬ ಮಾತಿದೆ. ಆದರೆ, ಯಥಾ ರಾಜ, ತಥಾ ಅಧಿಕಾರಿಗಳು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಚಿವರು, ಶಾಸಕರು ಹೇಗೆ ಕೆಲಸ ಮಾಡುತ್ತಾರೋ, ಅಧಿಕಾರಿಗಳೂ ಹಾಗೇ ಮಾಡುತ್ತಾರೆ ಎಂದು ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ಪಾಲಿಕೆ ಆಯುಕ್ತ ಶಿಲ್ಪ ನಾಗ್ ಜಗಳ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.