ಮೈಸೂರು: ನನ್ನ ರಾಜೀನಾಮೆಯಿಂದ ಕೊರೊನಾ ಕಂಟ್ರೋಲ್ ಆಗುತ್ತೆ ಅನ್ನೋದಾದರೆ ರಾಜೀನಾಮೆ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನನ್ನ ರಾಜೀನಾಮೆಯಿಂದ ಕೊರೊನಾ ಕಂಟ್ರೋಲ್ ಆಗುತ್ತೆ ಅನ್ನೋದಾದ್ರೆ ರಾಜೀನಾಮೆ ಕೊಡುವೆ. ಕಾಂಗ್ರೆಸ್‍ಗೆ ಅದರಿಂದ ಸಂತೋಷ ಆಗೋದಾದರೆ ರಾಜೀನಾಮೆ ಕೊಡುತ್ತೇನೆ ಎಂದು ಎಸ್ ಟಿ ಎಸ್ ತಿಳಿಸಿದರು.
ನನ್ನ ತಪ್ಪೇನು ಅಂತ ಹೇಳಿದರೆ ತಿದ್ದುಕೊಳ್ಳುವೆ ಎಂದ ಅವರು ಮೈಸೂರಿನ ಬೆಳವಣಿಗೆ ನೋಡಿ ನನಗೆ ವೈಯಕ್ತಿಕ ನೋವಾಗಿದೆ.
ಒಬ್ಬರೇ ಕೊರೊನಾ ನಿಯಂತ್ರಣ ಮಾಡ್ತಿದ್ದಾರೆ ಅನ್ನೋ ಭ್ರಮೆ ಬೇಡ. ಇದು ಟೀಂ ವರ್ಕ್ 11 ಕ್ಷೇತ್ರದ ಶಾಸಕರು, ಅಧಿಕಾರಿಗಳು, ವೈದ್ಯರು, ಪೆÇಲೀಸರು, ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ನಾನು ಯಾವುದೇ ಮಾಹಿತಿ ನೀಡಿಲ್ಲ. ಅವರು ಅವರದ್ದೇ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿ ಎಸ್ ಮೈಸೂರಿನ ಎಲ್ಲಾ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅವರು ವರದಿಯನ್ನು ಸಿಎಂಗೆ ಸಲ್ಲಿಸುತ್ತಾರೆ. ಆ ಮಾಹಿತಿ ಆಧರಿಸಿ ಕ್ರಮ ಆಗಲಿದೆ ಎಂದು ತಿಳಿಸಿದರು.
ನಾನು ಇಂದು ಸಂಜೆ ಅವರ ಬಳಿ ಮಾಹಿತಿ ಪಡೆದುಕೊಳ್ಳುತ್ತೇನೆ. ಮುಖ್ಯಮಂತ್ರಿಗಳೇ ಅಂತಿಮವಾಗಿ ನಿರ್ಧಾರ ಮಾಡಲಿದ್ದಾರೆಂದು ಸಚಿವ ಸೋಮಶೇಖರ್ ಹೇಳಿದರು.

