ಪರಿಸರ ನಾಶ ಮಾಡಿದರೆ ಮನುಕುಲಕ್ಕೆ ಕಂಟಕ -ಜೋಗಿಮಂಜು

ಮೈಸೂರು: ಇಂದು ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಡಿ.ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೌಟಿಲ್ಯ ರಘುರವರು ನಗರದ ಜಲದರ್ಶನಿ ಅತಿಥಿ ಗೃಹ ಆವರಣದಲ್ಲಿ ಶನಿವಾರ ಬಾದಾಮಿ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ರಘುರವರು ವಿಶ್ವ ಪರಿಸರ ಉಳಿವಿಗಾಗಿ ಪ್ರತಿ ಮನೆಯ ಮುಂಭಾಗ ಗಿಡವನ್ನು ನೆಡಬೇಕು ಹಾಗೆಯೇ ಕೊರೊನಾವನ್ನು ಹೋಗಲಾಡಿಸಲು ಆಮ್ಲಜನಕದ ಅವಶ್ಯಕತೆ ಇದೆ ನಾವು ವಾಸಿಸುವ ಪರಿಸರವನ್ನು ಕಲ್ಮಶಗೊಳಿಸದೆ ಸ್ವಚತೆಯಿಂದ ನಾಗರೀಕರಾದ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಮೊರ್ಚಾ ದ ನಗರ ಅಧ್ಯಕ್ಷ ಜೋಗಿಮಂಜು ಮಾತಾನಾಡಿ, ವಾಯು ಮಾಲಿನ್ಯ, ಜಲ ಮಾಲಿನ್ಯವನ್ನು ತಡೆಯಲು ಪರಿಸರ ಮುಖ್ಯ. ಯುವ ಪೀಳಿಗೆಯು ಪರಿಸರವನ್ನು ಉಳಿಸಬೇಕು. ಪರಿಸರ ನಾಶ ಮಾಡಿದರೇ ಮುಂದಿನ ದಿನಗಳಲ್ಲಿ ಮನುಕುಲಕ್ಕೆ ಕಂಟಕವಾಗಲಿದೆ. ಯುವಕರಾದ ನಾವುಗಳು ಪ್ರಕೃತಿಯ ಗಾಳಿ, ಬೆಳಕನ್ನು ಮಾನವ ಕುಲ ಅವಲಂಬಿಸಿರುವುರಿಂದ ಪರಿಸರ ಉಳಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಈ ಸಂಧರ್ಭದಲ್ಲಿ ವಿ.ವಿ.ಪುರಂ ಪೆÇೀಲಿಸ್ ಠಾಣೆಯ ವೃತ್ತ ನಿರೀಕ್ಷಕ ದಿವಾಕರ್, ಭಾ.ಜ.ಪ.ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಇದ್ದರು.