–
ಮೈಸೂರು: ನಗರಪಾಲಿಕೆ ಆಯುಕ್ತೆ ಐಎಎಸ್ ಅಧಿಕಾರಿ ಶಿಲ್ಪಾನಾಗ್ ರವರ ವಿರುದ್ಧ ಕರ್ನಾಟಕ ಸರ್ಕಾರ ಶಿಸ್ತು ಕ್ರಮಕೈಗೊಳ್ಳಬೇಕೆಂದು ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಅವರು ಆಗ್ರಹಿಸಿದ್ದಾರೆ.
ವಿಕಾಸ್ ಶಾಸ್ತ್ರಿರವರು ಶನಿವಾರ ನಗರದ ವಿವೇಕಾನಂದನಗರ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಎದುರು ಮನವಿ ಫಲಕ ಹಿಡಿದು ಸರ್ಕಾರಕ್ಕೆ ಆಗ್ರಹಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ದಕ್ಷ ಆಡಳಿತ ಕಾರ್ಯವೈಖರಿ ವಿರುದ್ಧ ಯಾವುದೇ ಪುರಾವೆ ಬಿಡುಗಡೆ ಮಾಡದೆ ಕಿರುಕುಳ ಆರೋಪ ಮತ್ತು ಜಾತಿ ಪ್ರಶ್ನೆ ನೆಪವಿಟ್ಟುಕೊಂಡು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಆರೋಪ ಮಾಡಿರುವ ನಗರಪಾಲಿಕೆ ಆಯುಕ್ತೆ ಐಎಎಸ್ ಅಧಿಕಾರಿ ಶಿಲ್ಪಾನಾಗ್ ರವರ ವಿರುದ್ಧ ಕರ್ನಾಟಕ ಸರ್ಕಾರ ಶಿಸ್ತು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಕೊರೊನಾ ನಿಯಂತ್ರಿಸಲು ರಾಜ್ಯಸರ್ಕಾರ ಲಾಕ್ಡೌನ್ ನಿರ್ಧಾರ ಕೈಗೊಳ್ಳುವ ಮುನ್ನವೇ ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರವರು ಅನ್ಯಜಿಲ್ಲೆಗಳಿಂದ ವಾಹನ ಸಂಚಾರ ರದ್ದುಗೊಳಿಸಿದರು, ಚಿತ್ರಮಂದಿರ ಪ್ರದರ್ಶನ ನಿಭರ್ಂಧಿಸಿದರು, ಕೊವಿಡ್ ಸೋಂಕು ಪರೀಕ್ಷೆ ಸಂಖ್ಯೆ ಹೆಚ್ಚಿಸಿದರು, 144ಸೆಕ್ಷನ್ ಸೇರಿದಂತೆ ವಿವಿಧ ಹಂತವಾಗಿ ಕ್ರಮಕೈಗೊಂಡು ನಿಯಂತ್ರಿಸಿದರು, ಆಮ್ಲಜನಕ ಆಂಬ್ಯಲೆನ್ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ನಿರ್ವಹಣೆ, ಐಸೋಲೆಶನ್ ಸೇರಿದಂತೆ ಎಲ್ಲವದಕ್ಕೂ ಕೋವಿಡ್ ವಾರ್ ರೂಂ ಮತ್ತು ಸಹಾಯವಾಣಿ ತೆರೆದು ಜನರ ಹಿತದೃಷ್ಟಿಯಿಂದ ಶ್ರಮಿಸುತ್ತಿದ್ದಾರೆ. ಆದರೆ ಮೈಸೂರು ನಗರದಲ್ಲಿ 18-44 ವಯಸ್ಕರ ಯುವಕರಿಗೆ ಲಸಿಕೆಯೇ ಸಿಗುತ್ತಿಲ್ಲ, ಸಿಕ್ಕರೂ ಸಹ ಕೋವಿಡ್ ಶೀಲ್ಡ್ ಲಸಿಕೆಯನ್ನ ಕೆಲವು ಖಾಸಗಿ ಆಸ್ಪತ್ರೆಗಳು ದುಡ್ಡಿಗಾಗಿ ಮಾರಾಟಮಾಡುತ್ತಿದ್ದಾರೆ ಇನ್ನು ಕೆಲವು ಕಡೆ ಕೊರೊನಾ ವಾರಿಯರ್ಸ್ ಹೆಸರಿನಲ್ಲಿ ರಾಜಕಾರಣಿಗಳು ಉದ್ಯಮಿಗಳು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಗೊತ್ತಿದ್ದರೂ ಸಹ ಶಿಲ್ಪ ನಾಗ್ ರವರು ಕಣ್ಣು ಮುಚ್ಚಿ ಕೂತಿರುವದು ಆರೋಗ್ಯ ಇಲಾಖೆಯಲ್ಲಿ ಲಸಿಕೆ ವಿತರಣೆಯಲ್ಲಿ ಭ್ರμÁ್ಟಚಾರವಾಗಿದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದವರು ದೂರಿದರು.

