ದೇಶದಲ್ಲಿ ಅಶಾಂತಿ, ಗೊಂದಲವನ್ನು ಕಾಂಗ್ರೆಸ್ ಯಾಕೆ ನಿರ್ಮಾಣ ಮಾಡುತ್ತಿದೆ ಎಂದು ಪ್ರಶ್ನಿಸಿದ ಎಂ.ಜಿ.ಮಹೇಶ್

ಮೈಸೂರು: ದೇಶದಲ್ಲಿ ಅಶಾಂತಿ, ಗೊಂದಲವನ್ನು ಕಾಂಗ್ರೆಸ್ ಯಾಕೆ ನಿರ್ಮಾಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯವಕ್ತಾರ ಎಂ.ಜಿ.ಮಹೇಶ್ ಪ್ರಶ್ನಿಸಿದರು.
ನಗರದ ಬಿಜೆಪಿ ಕಛೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಳೆದ ಹಲವು ದಿನಗಳ ಹಿಂದೆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ದೇಶದ ಮುಸ್ಲಿಮರು ನನ್ನ ಬ್ರದರ್ಸ್ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಕಾಶ್ಮಿರದಲ್ಲಿ ನಡೆದ ಬಿಜೆಪಿಯ ಕೌನ್ಸಿಲರ್ ಮತ್ತು ಅಧ್ಯಕ್ಷ ರಾಕೇಶ್ ಪಂಡಿತ್ ರನ್ನು ಅಲ್ಲಿನ ಮುಸ್ಲಿಮರು ಗುಂಡಿಕ್ಕಿ ಸಾಯಿಸುತ್ತಾರೆ. ಡಿ.ಕೆ.ಶಿವಕುಮಾರ್ ಅವರೇ ಯಾವ ತಮ್ಮ ಬ್ರದರ್ಸ್ ಗಳು ಈ ಕೃತ್ಯ ಮಾಡಿದ್ದಾರಲ್ಲ, ಈ ಹತ್ಯೆಗೆ ತಾವೇನು ಉತ್ತರ ಕೊಡುತ್ತೀರಿ ಎಂದು ಪ್ರಶ್ನಿಸಿದರು.
ರಾಜಸ್ಥಾನದ ಮುಸ್ಲಿಮ್ ಮಹಿಳೆಯೋರ್ವರು 256 ಕೋವಿಶಿಲ್ಡ್ ವ್ಯಾಕ್ಸಿನ್ ನ್ನು ಜನರಿಗೆ ನೀಡದೆ ಅದನ್ನು ಚರಂಡಿಗೆ ಚೆಲ್ಲಿದ್ದು ಅದಕ್ಕೆ ತಮ್ಮ ಉತ್ತರವೇನು? ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಮುಸ್ಲಿಮರು ಮತ್ತು ಟಿಎಂಸಿ ಕಾರ್ಯಕರ್ತರಿಂದ 14 ಕಾರ್ಯಕರ್ತರ ಕೊಲೆ ಆಗಿದೆ. ಪಶ್ಚಿಮ ಬಂಗಾಳದ ಈ ಹತ್ಯೆಕೋರರನ್ನು ನೀವು ಸಮರ್ಥಿಸುವಿರಾ? ಹಿಂದುಗಳ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆದಾಗ ಮಾತನಾಡದೆ ಇರುವುದು ನಿಮ್ಮ ಮುಸ್ಲಿಮ್ ತುಷ್ಟೀಕರಣ ನೀತಿಗೆ ಉದಾಹರಣೆ ಅಲ್ಲವೇ? ಎಂದರು.
ಈ ಮಾರಣ ಹೋಮಗಳಿಗೆ ತಾವೇನು ಉತ್ತರವನ್ನು ಕೊಡುತ್ತೀರಿ, ಕೊರೊನಾದ ಈ ಸಂಕ್ರಮಣದ ಕಾಲದಲ್ಲಿ ದೇಶದಲ್ಲಿ ತಮ್ಮ ರಾಜಕೀಯದಿಂದ ಸಮಸ್ಯೆ ತಂದವರು ನೀವು, ವ್ಯಾಕ್ಸಿನ್ ಕುರಿತಂತೆ ವೀಕೇಂದ್ರಿಕರಣ ಆಗಬೇಕು, ರಾಜ್ಯಗಳಿಗೆ ಅವಕಾಶ ಮಾಡಿಕೊಡಬೇಕು ಅಂತ ಹೇಳಿದಿರಿ ಆದರೆ ತಮ್ಮದೇ ಸರ್ಕಾರ ಪಂಜಾಬ್ ನಲ್ಲಿ 400 ರೂ.ಗೆ ತೆಗೆದುಕೊಂಡ ವ್ಯಾಕ್ಸಿನ್ ನ್ನು 1060ರೂ.ಗೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿರುವುದು ಸುಳ್ಳಾ? ಎಂದು ಕೇಳಿದರು.
ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಜನರಿಂದ ಯಾಕೆ ಸುಲಿಗೆ ಮಾಡುತ್ತಿದ್ದೀರಿ, ಉಚಿತವಾಗಿ ಕೊಟ್ಟ ವ್ಯಾಕ್ಸಿನ್ ನ್ನು ಹಣಪಡೆದು ಎಂತಹ ಸ್ಥಿತಿ ತರುತ್ತಿದ್ದೀರಿ, ಕಾಂಗ್ರೆಸ್ ಸಿಸ್ಟ್‍ಂ ನಲ್ಲೇ ಭ್ರμÁ್ಟಚಾರವಿದೆ ಎಂದರು.
ತಮ್ಮದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ಬೆಂಕಿ ಹಚ್ಚಿದರೆ ಸುಟ್ಟು ಹಾಕಿದ ಗೂಂಡಾಗಳಿಗೆ ಸನ್ಮಾನ ಮಾಡುತ್ತೀರಿ. ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿರುವ ಬ್ರದರ್ಸ್ ಗಳ ಪರವಾಗಿ ನೀವು ಉತ್ತರ ಕೊಡಬೇಕು ಎಂದು ಮಹೇಶ್ ಹೇಳಿದರು.
ಇವೆಲ್ಲವನ್ನು ದೇಶದ ಜನ ಮರೆಯುತ್ತಾರೆ ಅಂದುಕೊಳ್ಳಬೇಡಿ, ದೇಶದೊಳಗೆ ಬಿಜೆಪಿ ಮುಖಂಡರ, ಹಿಂದೂಗಳ ಮಾರಣ ಹೋಮ ಮುಸ್ಲೀಂರಿಂದ ಆಗಿದೆ ಅದಕ್ಕೆ ನಾವು ತಮ್ಮಿಂದ ಉತ್ತರ ಬಯಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಸಿ.ಹೆಚ್.ವಿಜಯ್ ಶಂಕರ್, ಮಾಜಿ ಶಾಸಕ ಡಾ.ಭಾರತೀಶಂಕರ್, ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸ್, ಹಿಂದುಳಿದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಮೈಸೂರು ನಗರ ಬಿಜೆಪಿ ಸಹ ವಕ್ತಾರ ಕೇಬಲ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.