ಬೆಂಗಳೂರು: ಬಿಜೆಪಿ ಹೈಕಮಾಂಡ್ ಸೂಚಿಸಿದರೆ ತಕ್ಷಣವೇ ರಾಜಿನಾಮೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹೈ ಕಮಾಂಡ್ ಯಾವ ದಿವಸ ಬೇಡ ಯಡಿಯೂರಪ್ಪನವರೆ ಎನ್ನುತ್ತಾರೊ ಆ ದಿನ ನಾನು ರಾಜಿನಾಮೆ ನೀಡುತ್ತೇನೆ ಎಂದು ಹೇಳಿ, ನಾನು ಯಾವುದೆ ಗೊಂದಲದಲ್ಲಿಲ್ಲ ಎಂದರು.
ಹೈಕಮಾಂಡ್ ಎಲ್ಲಿ ತನಕ ನನ್ನ ಮೇಲೆ ವಿಶ್ವಾಸ ಇಟ್ಟಿರುತ್ತದೆಯೋ ಅಲ್ಲಿಯ ವರೆಗೆ ನಾನು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಸಿಎಂ ಹೇಳಿದರು.
ಪರ್ಯಾಯ ವ್ಯಕ್ತಿ ಇಲ್ಲ ಎಂದು ನಾನು ಒಪ್ಪುವುದಿಲ್ಲ ಎಂದು ಬಿಎಸ್ ವೈ ಹೇಳಿದರು.
ಹೈಕಮಾಂಡ್ ಸೂಚಿಸಿದರೆ ರಾಜಿನಾಮೆ ನೀಡುತ್ತೇನೆ -ಯಡಿಯೂರಪ್ಪ

