ಮೈಸೂರು, ಜೂ. 9- ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದೇನೆಯೇ ಹೊರತು ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸಾ.ರಾ. ಮಹೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಶಾಸಕ ಸಾ.ರಾ.ಮಹೇಶ್ ಪತ್ರ ಬರೆದಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ 10 ಆರೋಪಗಳನ್ನು ಒಳಗೊಂಡ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದಿದ್ದೇನೆ. ಈ ಬಗ್ಗೆ ಸಿಎಂ ತನಿಖೆ ನಡೆಸಲಿ ಎಂದವರು ಹಳಿದರು.
ನಾನು ರೋಹಿಣಿ ಸಿಂಧುರಿ ಅವರು ಮೈಸೂರಿಗೆ ಬಂದಾಗಿನಿಮದಲೂ ಅವರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸುತ್ತೇನೆ ಎಂದ ಅವರು ಕೋವಿಡ್ ಗಾಗಿ ಮೈಸೂರಲ್ಲಿ ಬೇರೆ ಅಧಿಕಾರಯನ್ನು ನೇಮಿಸಿ ಎಂದೂ ನಾನು ಸರಕಾರಕ್ಕೆ ಆಗ್ರಹಿದ್ದೇ ಎಂದು ಅವರು ತಿಳಿಸಿದರು.
ರೋಹಿಣಿ ಸಿಂಧೂರಿಯವರು ಮೈಸೂರು ಜಿಲ್ಲೆಯಿಂದ ವರ್ಗವಾಗಿ ನಿರ್ಗಮಿಸುವ ಸಂದರ್ಭದಲ್ಲಿ ತಮ್ಮ ಕರ್ತವ್ಯ ಲೋಪ ಮತ್ತು ವೈಫಲ್ಯಗಳನ್ನು ಮುಚ್ಚಿಡುವ ಯತ್ನದಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ಭೂ ಒತ್ತುವರಿಯನ್ನು ತೆರವುಗೊಳಿಸಲು ಪ್ರಯತ್ನಿಸಿದ್ದೇ ಕಾರಣ ಎಂದು ಹೇಳಿಕೆ ನೀಡಿರುತ್ತಾರೆ. ಆದರೆ ವಾಸ್ತವದಲ್ಲಿ ಇವರ ಎಂಟು ತಿಂಗಳ ಅಧಿಕಾರಾವಧಿಯಲ್ಲಿ ನ್ಯಾಯಾಲಯದ ಆದೇಶದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಕೇರ್ಗಳ್ಳಿ ಗ್ರಾಮದ ಕೆರೆಯ ಹೂಳೆತ್ತುವ ಕಾರ್ಯವನ್ನು ಕೈಗೊಂಡಿರುವುದನ್ನು ಹೊರತುಪಡಿಸಿ ಇಡೀ ಮೈಸೂರು ನಗರ ವ್ಯಾಪ್ತಿಯಲ್ಲಿ ಒಂದೇ ಒಂದು ಗುಂಟೆ ಒತ್ತುವರಿಯನ್ನು ತೆರವುಗೊಳಿಸುವ ಪ್ರಯತ್ನವನ್ನು ಇವರು ಮಾಡಿಲ್ಲ ಎಂದರು.
ಮೈಸೂರಲ್ಲಿ ಭೂ ಒತ್ತುವರಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ್ದರೆ ಆ ಮಾಹಿತಿ ಆಧಾರದ ಮೇಲೆ ಎಲ್ಲೆಲ್ಲಿ, ಯಾರು, ಯಾರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಆ ಅಕ್ರಮದಲ್ಲಿ ಭಾಗಿಯಾಗಿರುವವರು ಯಾರು ಎಂಬ ಮಾಹಿತಿಯನ್ನು ರೋಹಿಣಿ ಸಿಂಧೂರಿಯವರಿಂದ ಪಡೆದು ಆ ಬಗ್ಗೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸಿ ಭೂ ಒತ್ತುವರಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಸಾರಾ ಮಹೇಶ್ ಒತ್ತಾಯಿಸಿದರು.
ಮೈಸೂರಿನವರೇ ಆದ ಮಾಜಿ ಮುಖ್ಯಮಂತ್ರಿಗಳು ಮೈಸೂರು ಭೂ ಹಗರಣ ಕುರಿತು ಆರೋಪ ಮಾಡಿದ್ದಾರೆ. ಹಾಗಿದ್ದರೆ ಅವರ ನೇತೃತ್ವದಲ್ಲಿಯೇ ಸರಕಾರ ಸಮಿತಿ ರಚಿಸಿ ಮೈಸೂರಿನಲ್ಲಿನ ಭೂ ಒತ್ತುವರಿ ಬಗ್ಗೆ ತನಿಖೆ ನಡೆಸಲಿ ಎಂದು ಮಹೇಶ್ ಸವಾಲು ಹಾಕಿದರು.
ರೋಹಿಣಿ ಸಿಂಧೂರಿ ಅವರು ಮೈಸೂರಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಅವಧಿಯಲ್ಲಿ 2021ರ ಮೇ ಮತ್ತು ಜೂನ್ ತಿಂಗಳಿನಲ್ಲಿ ಅವರ ಮನೆಯ ವಿದ್ಯುತ್ ಬಿಲ್ ಸಾವಿರಾರು ರೂ. ಆಗಿದೆ ಎಂದು ಸಾರಾ. ಮಹೇಶ್ ದಾಖಲೆ ಬಿಡುಗಡೆ ಮಾಡಿದರು.
2021ರ ಮೇ ತಿಂಗಳಿನಲ್ಲಿ 42371 ರೂ ಹಾಗೂ ಜೂನ್ ಮಾಹೆಯಲ್ಲಿ 36406 ರೂ. ಆಗಿದೆ. ಡಿಸಿ ಮನೆಗೆ 3 ವಿದ್ಯುತ್ ಮೀಟರ್ ಇದೆ. ಈ ಪೈಕಿ ನಾನು 2 ಮೀಟರ್ಗಳ ಮಾಹಿತಿ ನೀಡಿದ್ದೇನೆ. ಎರಡು ಮೀಟರ್ ಬಿಲ್ 78,777 ರೂ. ಆಗಿದೆ ಇಷ್ಟು ಬಿಲ್ ಸಿಎಂ ಮನೆಗೆ ಬರುವುದಿಲ್ಲ. ಯಾವ ಸಚಿವರ ಮನೆಗೂ ಬರುವುದಿಲ್ಲ ಎಂದು ಹೇಳಿದರು.
ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಆಗ್ರಹಿದ್ದೇ; ವರ್ಗಾವಣೆ ಮಾಡಿಸಿಲ್ಲ -ಸಾ.ರಾ. ಮಹೇಶ್

