ರೋಹಿಣಿ ಸಿಂಧೂರಿಯವರು ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳನ್ನು ಜಾರಿ ಮಾಡುವಂತೆ ಹೆಚ್. ವಿಶ್ವನಾಥ್ ಆಗ್ರಹ

ಮೈಸೂರು: ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮೈಸೂರಿನಲ್ಲಿ ನಡೆದಿರುವ ಭೂ ಅಕ್ರಮ ಬಗ್ಗೆ ಮಾಡಿರುವ ಆದೇಶವನ್ನು ನಿಗದಿತ ಸಮಯದಲ್ಲಿ ಜಾರಿ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಹೆಚ್. ವಿಶ್ವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರು ಮೈಸೂರು ನಗರದ ಆಸುಪಾಸು ಹೊಂದಿಕೊಂಡಂತೆ ನಡೆದಿರುವ ಭೂ ಅಕ್ರಮಗಳನ್ನು ಕಡತಗಳ ಸಮೇತ ಖುದ್ದು ಪರಿಶೀಲಿಸಿ ನಾಲ್ಕು ಆದೇಶಗಳನ್ನು ಮಾಡಿರುತ್ತಾರೆ.
ಮೈಸೂರಿನಲ್ಲಿ ಭೂ ಅತಿಕ್ರಮ, ಭೂಗಳ್ಳ ದಂಧೆ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ಆರ್ ಟಿ ಐ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ದಾಖಲೆ ಪತ್ರಗಳ ಸಮೇತ ಲಿಖಿತ ದೂರನ್ನು ಸಲ್ಲಿಸಿದ್ದಾರೆ.
ಇಂತಹ ಪ್ರಮುಖ ದೂರುಗಳನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಡತಗಳನ್ನು ತೀವ್ರವಾಗಿ ಪರಿಶೀಲಿಸಿ ಭೂಗಳ್ಳರಿಂದ ಆಗಿರುವ ಭೂ ಅಕ್ರಮಗಳ ಬಗ್ಗೆ ನಾಲ್ಕು ವಿವಿಧ ಗಂಭೀರ ಆದೇಶಗಳನ್ನು ಮಾಡಿರುತ್ತಾರೆ ಮತ್ತು ಹಗರಣಗಳನ್ನು ಸರ್ಕಾರದ ಗಮನಕ್ಕೆ ತಂದಿರುತ್ತಾರೆಂದರು.
ಮೈಸೂರು ನಗರದ ಅಭಿವೃದ್ಧಿಯ ಬಗ್ಗೆ ಮತ್ತು ವಸತಿಹೀನರ ಸೂರಿನ ಬಗ್ಗೆ ಕಳಕಳಿ ಹೊಂದಿದ ಓರ್ವ ಪ್ರಜೆಯಾಗಿ ಜಿಲ್ಲಾಧಿಕಾರಿಗಳು ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳನ್ನು ತುರ್ತು ನಿಗದಿತ ಸಮಯದೊಳಗೆ ಕ್ರಮವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ ಎಂದವರು ತಿಳಿಸಿದರು.
ಪಾಪ ಅವರು ಬಲಿಪಶು ಆಗಿ ಹೋದರು. ವಾಟ್ ವಾಸ್ ಯುವರ್ ಕಮಿಷನ್ ? ಸಿಂಧೂರಿ ಎತ್ತಂಗಡಿಯೇ ನಿಮ್ಮ ಕಮಿಷನ್ನಾ? ಅದಕ್ಕೋಸ್ಕರ ನಿಮ್ಮನ್ನಿಟ್ಟುಕೊಂಡು ಇμÉ್ಟಲ್ಲ ಗಲಾಟೆಗಳಾಯ್ತಾ? ಅದೇ ತೋರಿಸುತ್ತೆ, ಅವರ ಸ್ಟೇಟ್ ಮೆಂಟ್ ತೋರಿಸತ್ತೆ ಏನೇನಾಯ್ತು ಇಲ್ಲಿ ಅಂತ, ಇμÉ್ಟೂಂದು ಗೊಂದಲ ಯಾವ ಜಿಲ್ಲೆಯಲ್ಲೂ ಇಲ್ಲ ಎಂದು ವಿಶ್ವನಾಥ್ ಹೇಳಿದರು.
ಆಡಳಿತ ಹೇಗ್ರಿ ಮಾಡೋದು ಇಲ್ಲಿ ಕುಳಿತುಕೊಂಡು ನಮ್ಮ ನಮ್ಮ ಸ್ವಾರ್ಥಕ್ಕೆ ಗುದ್ದಾಟ ಮಾಡುತ್ತ ನಿಂತುಕೊಂಡರೆ ಹೇಗೆ? ಇದಲ್ಲ ಎಂದು ಅವರು ಪ್ರಶ್ನೆ ಮಾಡಿದರು.