ನನಗೆ ಕೆಲಸ ಮಾಡುವ ಖಯಾಲಿ ಇದೆ -ಸಚಿವ ವಿ.ಸೋಮಣ್ಣ

ಮೈಸೂರು: ನನಗೆ ಕೆಲಸ ಮಾಡುವ ಖಯಾಲಿ ಇದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಸಚಿವ ವಿ. ಸೋಮಣ್ಣ ಶನಿವಾರ ಭೇಟಿ ನೀಡಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೆಲವರಿಗೆ ಒಂದೊಂದು ಥರಾ ಖಯಾಲಿ ಇರುತ್ತದೆ. ನನಗೆ ಕೆಲಸ ಮಾಡುವ ಖಯಾಲಿ ಇದೆ ಎಂದು ಸಚಿವ ಸೋಮಣ್ಣ ತಿಳಿಸಿದರು.
ಇದು ಕೊರೊನಾ ನಿಯಂತ್ರಣ ಮಾಡಬೇಕಾದ ಸಮಯ. ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಸರಿಯಲ್ಲ ಎಂದರು.
ಸಚಿವ ಸಿ.ಪಿ.ಯೋಗೇಶ್ವರ್ ದೆಹಲಿಗೆ ಹೋಗುತ್ತಿರುವುದು ಗೊತ್ತಿಲ್ಲ ಯಾರ್ಯಾರು ಎಲ್ಲೆಲ್ಲಿಗೆ ಹೋಗ್ತಾರೋ ಗೊತ್ತಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಸೋಮಣ್ಣ ಉತ್ತರಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ. ನಾನು ಮಂತ್ರಿಯಾಗಿ ನನಗೆ ವಹಿಸಿರುವ ಕೆಲಸ ಮಾಡುತ್ತಿದ್ದೇನೆ. ದೆಹಲಿಗೆ ಹೋಗುತ್ತಿರುವ ಪುಣ್ಯಾತ್ಮರಿಗೆ ಕೇಳಬೇಕು. ಯಾಕೆ ಹೋಗ್ತಿದಿರಾ ಎಂದು? ಸೋಮಣ್ಣ ಹೇಳಿದರು.
ಸಿಎಂ ಯಡಿಯೂರಪ್ಪ ಪ್ರತಿ ಜಿಲ್ಲೆ ಜಿಲ್ಲೆ ತಿರುಗುತ್ತಿದ್ದಾರೆ. ಎಲ್ಲವನ್ನೂ ಹೈ ಕಮಾಂಡ್ ಗಮನಿಸುತ್ತಿದೆ. ಹೈಕಮಾಂಡ್ ಇದಕ್ಕೆಲ್ಲಾ ಒಂದು ಅಂಕಿತ ಹಾಕಬೇಕಿದೆ ಎಂದು ಅವರು ತಿಳಿಸಿದರು.