ಮೈಸೂರು: ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಟ್ಟ ಒಂದು ರೂ. ಜನ ಸಾಮಾನ್ಯರಿಗೆ ತಲುಪುವಷ್ಟರೊಳಗೆ 25 ಪೈಸೆ ಆಗಿರುತ್ತಿತ್ತು ಎಂದು ಶಾಸಕ ಎಲ್. ನಾಗೇಂದ್ರ ಹೇಳಿದರು.
ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಹೆಬ್ಬಾಳದಲ್ಲಿರುವ ಬಸವನ ಗುಡಿ ಕಲ್ಯಾಣ ಮಂಟಪದಲ್ಲಿ ಅನ್ ಲೈನ್ ನಲ್ಲಿ ಅಸಂಘಟಿತ ವಲಯದ ಜನರಿಗೆ ಪತ್ರ ವಿತರಣೆ ಮಾಡಿ ಶಾಸಕರು ಮಾತನಾಡಿದರು.
ಅದರೆ ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆ ಪ್ರಾಮಾಣಿಕವಾಗಿ ಜನರ ಖಾತೆಗೆ ಹಣ ತಲುಪುತ್ತಿರುವುದು ಸಂತೋಷದ ಸಂಗತಿ ಎಂದರು.
ಚಾಮರಾಜ ಕ್ಷೇತ್ರದಲ್ಲಿ ಸರಿ ಸುಮಾರು ಒಂದು ಲಕ್ಷ ಸಂಖ್ಯೆಯ ಹಿಂದುಳಿದ ವರ್ಗದವರು ಇದ್ದು ಕೋವಿಡ್ 2.0ನ ಸಂಧರ್ಭದಲ್ಲಿ ಅವರುಗಳು ಮಾಡುವ ಕೂಲಿ ಕೆಲಸ ಎಲ್ಲಾ ನಿಷ್ಕ್ರಿಯವಾಗಿದೆ. ಇದನ್ನು ಅರಿತ ಮುಖ್ಯಮಂತ್ರಿಗಳು ಹಣಕಾಸಿನ ನೆರವು ಹಾಗೂ ಕೋವಿಡ್ ನಿಂದ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ ಗಳನ್ನು ಘೋಷಿಸಿದ್ದಾರೆಂದರು.
ಕೋವಿಡ್ ನಿಂದ ಚಾಮರಾಜ ಕ್ಷೇತ್ರ ಮುಕ್ತ ಮಾಡಲು ಕ್ಷೇತ್ರದ ಜನತೆಯ ಸಹಕಾರ ಅಗತ್ಯ ಎಂದರು.
ಹಿಂದುಳಿದ ವರ್ಗಗಳ ಮೊರ್ಚಾದ ನಗರ ಅಧ್ಯಕ್ಷ ಜೋಗಿಮಂಜು ಮಾತನಾಡಿ, ರಾಜ್ಯ ಸರ್ಕಾರ ಕೋವಿಡ್ ನ ಸಂಧರ್ಭದಲ್ಲಿ ಹಿಂದುಳಿದ ವರ್ಗದವರ ಪರ ಇದೆ ಎನ್ನುವುದಕ್ಕೆ ಇಂತಹ ಯೋಜನೆಗಳೆ ಸಾಕ್ಷಿ ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿಂದುಳಿದಿರುವ, ಅಸಂಘಟಿತ, ಕೂಲಿ ಕೆಲಸ, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಟೈಲರಿಂಗ್, ಸವಿತಾ ಸಮಾಜ, ಮಡಿವಾಳ, ಸಮಾಜದ ಎಲ್ಲಾರಿಗೂ ರಾಜ್ಯ ಸರ್ಕಾರ ಮೊದಲು ಘೋಷಿಸಿದ ಪ್ಯಾಕೇಜ್ ನಲ್ಲಿ ಕೆಲವರಿಗೆ 2000, 3000 ರೂ ಗಳ ನೋಂದಣಿ ಮಾಡಿಸಿ, ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸುಪ್ರೀಂ ಮಂಜು, ನಗರ ಪ್ರಧಾನ ಕಾರ್ಯದರ್ಶಿ ಗೋಪಾಲ್, ನಗರ ಪಾಲಿಕೆ ಸದಸ್ಯ ಚಿಕ್ಕವೆಂಕಟ್, ಮಣಿರತ್ನಂ, ಶಿವರಾಜ್, ಸೋಮು, ವೆಂಕಟಾಚಲ, ಸಿದ್ದೆಗೌಡ, ಕುಮಾರಣ್ಣ, ಚೌಡಪ್ಪ, ಅಭಿಲಾಶ್ ಕೊಟ್ಟಾಯ್ ಇದ್ದರು.

