ಶಂಕರಾಚಾರ್ಯರ ಭವ್ಯ ಪ್ರತಿಮೆ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಗೆ ಸನ್ಮಾನ

ಮೈಸೂರು: ಕೇದಾರನಾಥ್ ಪುಣ್ಯಕ್ಷೇತ್ರದಲ್ಲಿ ಶ್ರೀ ಶಂಕರಾಚಾರ್ಯರ ಭವ್ಯ ಪ್ರತಿಮೆಯನ್ನ ಪ್ರಧಾನಿ ನರೇಂದ್ರಮೋದಿ ಅವರು ಅನಾವರಣಗೊಳಿಸಲಿದ್ದು ಅದರ ಅದ್ಭುತ ಶಿಲ್ಪ ಕೆತ್ತನೆ ಮಾಡಿದಂತಹ ಶಿಲ್ಪಿ ಅರುಣ್ ರವರನ್ನ ನಗರದ ಸರಸ್ವತಿಪುರಂನಲ್ಲಿರುವ ಶಿಲ್ಪ ಕಲಾ ಕೇಂದ್ರದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ರವರು ಮಾತನಾಡಿ, 8ನೇ ಶತಮಾನದಲ್ಲಿ 32ನೇ ವರ್ಷದ ಜೀವಿತಾವಧಿಯಲ್ಲೆ ಕೇರಳದಿಂದ ಕಾಶ್ಮೀರದೊರೆಗೂ ಬರಿಗಾಲಿನಲ್ಲೇ ಪರ್ಯಟನೆ ಮಾಡಿ ಭಾರತದಲ್ಲಿ ಹಿಂದೂ ಧರ್ಮ ಬಲಿಷ್ಠವಾಗಿ ಬೇರೂರಲು ಪ್ರಾತಃ ಸ್ಮರಣೀಯರಾದವರು ಶ್ರೀಶಂಕರಾಚಾರ್ಯರ ಐಕ್ಯಕ್ಷೇತ್ರವಾದ ಉತ್ತರಕಾಂಡದ ಕೇದರಾನಾಥ ಸನ್ನಿಧಿಯಲ್ಲಿ ಶಂಕರಚಾರ್ಯರ ಭವ್ಯಪ್ರತಿಮೆ ನಿರ್ಮಾಣವಾಗಲಿದ್ದು ಮೈಸೂರಿನ ಶಿಲ್ಪಿ ಅರುಣ್ ರವರು ನಿರ್ಮಿಸಿದ್ದು ಮೈಸೂರಿಗರಿಗೆ ಸಂತಸದ ವಿಚಾರ, ಪ್ರಧಾನಿ ನರೇಂದ್ರ ಮೋದಿ ರವರು ಇದನ್ನ ಅನಾವರಣಗೊಳಿಸಲಿದ್ದು ಶ್ರೀಶಂಕರ ಅಧ್ಯಯನ ಪೀಠ ಮತ್ತು ಮ್ಯೂಸಿಯಂ ಸ್ಥಾಪನೆಗೊಳಿಸಿರುವುದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಬ್ರಾಹ್ಮಣ ಯುವ ವೇದಿಕೆಯ ಉಪಾಧ್ಯಕ್ಷ ಅಜಯ್ ಶಾಸ್ತ್ರಿ, ಸಂಘಟನಾ ಕಾರ್ಯದರ್ಶಿ ಜಯಸಿಂಹ ಶ್ರೀಧರ್, ರಂಗನಾಥ್, ಕೆ.ಆರ್.ಎಸ್ ಗ್ರಾಮ ಪಂಚಾಯತಿ ಸದಸ್ಯ ವಿಜಯ್ ಕುಮಾರ್, ಪ್ರಶಾಂತ್, ಶ್ರೀಕಾಂತ್ ಕಶ್ಯಪ್ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.