ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಆನ್‍ಲೈನ್ ಯೋಗ ಸೆಷನ್

ಮೈಸೂರು: ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮಕ್ಕೆ ಯೋಗ ಒಂದು ಸಮಗ್ರ ವಿಧಾನ. ಒತ್ತಡವನ್ನು ಕಡಿಮೆ ಮಾಡಿ, ದೇಹವನ್ನು ಬಲಪಡಿಸಲು ಯೋಗ ಸಹಾಯ ಮಾಡುತ್ತದೆ. ಯೋಗದ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಜೂ. 21ರಂದು ಬೆಳಿಗ್ಗೆ 7 ರಿಂದ 8 ರವರೆಗೆ ವರ್ಚುವಲ್ ಯೋಗ ಸೆಷನ್ ಆಯೋಜಿಸುತ್ತಿದೆ.
ಖ್ಯಾತ ಕ್ಷೇಮ ಸಲಹಾತಜ್ಞ ಮತ್ತು ಲೈಫ್ ಕೋಚ್ ಸುಪ್ರಿಯಾ ದತ್ತಾ ಅವರು ವಿವಿಧ ರೀತಿಯ ಯೋಗಾಸನಗಳು ಮತ್ತು ಅದನ್ನು ಸೂಕ್ತವಾಗಿ ಮಾಡುವ ನಿಟ್ಟಿನಲ್ಲಿ ಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಈ ಆನ್‍ಲೈನ್ ಸೆಷನ್‍ನಲ್ಲಿ ಭಾಗವಹಿಸಲು ಆಸಕ್ತರು 9480363494 ಮತ್ತು 7829128776 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸೀಮಿತ ಸ್ಲಾಟ್‍ಗಳಿವೆ ಮತ್ತು ಯಾವುದೇ ನೋಂದಣಿ ಶುಲ್ಕವಿಲ್ಲ.
ವರ್ಚುವಲ್ ಸೆಷನ್‍ನಲ್ಲಿ ಭಾಗವಹಿಸಲು ಬಳಸಬಹುದಾದ ಲಿಂಕ್- https://meet.google.com/hux-afhc-tb
ಇಂತಹ ಸೆಷನ್‍ಗಳನ್ನು ಆಯೋಜಿಸುವ ಪ್ರಾಮುಖ್ಯತೆಯನ್ನು ವಿವರಿಸಿದ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಮೈಸೂರು ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ, ಸಾರ್ವಜನಿಕರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ಸೆಷನ್ ಆಯೋಜಿಸಲು ನಾವು ನಿರ್ಧರಿಸಿದ್ದೇವೆ. ಯೋಗದ ಸಂಪೂರ್ಣ ಅಡಿಪಾಯ ಸಮಾಧಾನ ಚಿತ್ತದ ಮೇಲೆ ನಿರ್ಮಿತವಾಗಿದೆ ಮತ್ತು ಈ ಕೋವಿಡ್ ಕಾಲದಲ್ಲಿ ಇದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಹಾಗಾಗಿ ಈ ಆನ್‍ಲೈನ್ ಸೆಷನ್‍ನಲ್ಲಿ ಜನರು ಭಾಗವಹಿಸಲು ಮತ್ತು ತಜ್ಞರಿಂದ ಗರಿಷ್ಠ ಲಾಭ ಪಡೆಯಬಹುದಾಗಿದೆ ಎಂದರು.
ಯೋಗ ಸೆಷನ್‍ನ ಪ್ರಯೋಜನಗಳ ಕುರಿತು ಮಾತನಾಡಿದ, ವೆಲ್‍ನೆಸ್ ಸಲಹಾತಜ್ಞೆ ಲೈಫ್ ಕೋಚ್ ಸುಪ್ರಿಯಾ ದತ್ತಾ, ನಮ್ಮ ಮನಸ್ಸು ಮತ್ತು ದೇಹವನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ. ಇದನ್ನು ಸಾಧಿಸಲು ಯೋಗ ಅತ್ಯುತ್ತಮ ಮಾರ್ಗ. ನಿಯಮಿತವಾಗಿ ಯೋಗ ಮಾಡುವುದರಿಂದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ ಎಂದರು.