ಬಿಎಸ್ ವೈರನ್ನ ಮುಟ್ಟಿದರೆ ಸುಟ್ಟು ಹೋಗ್ತೀವಿ -ಸಚಿವ ಸಿ.ಪಿ ಯೋಗೇಶ್ವರ್

ಕೊಪ್ಪಳ: ಬಿಎಸ್ ವೈರನ್ನ ಮುಟ್ಟಿದ್ರೆ ನಾವೇ ಸುಟ್ಟು ಹೋಗ್ತೀವಿ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆ ಅಂಜನಾದ್ರಿ ಬೆಟ್ಟಕ್ಕೆ ಬುಧವಾರ ಸಚಿವ ಯೋಗೇಶ್ವರ್ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ಕಾರ್ಯತಂತ್ರ ಹೆಣೆಯುವ ಕೆಲಸ ನಾವು ಎಂದಿಗೂ ಮಾಡುವುದಿಲ್ಲ ಎಂದು ಸಿ ಪಿ ಯೋಗೇಶ್ವರ್ ಹೇಳಿದರು.

ನಮ್ಮ ಆಂತರಿಕ ಸಮಸ್ಯೆ ಹೇಳಿಕೊಳ್ಳಲು ದೆಹಲಿಗೆ ಹೋಗ್ತಿದ್ದವು. ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ ಎಂದು ಅವರು ಹೇಳಿದರು.

ಪರೀಕ್ಷೆ ಬರೆದು ಉತ್ತರಕ್ಕಾಗಿ ನಾನು ಅಂಜನಾದ್ರಿಗೆ ಬಂದಿಲ್ಲ. ಪರೀಕ್ಷೆ ಫಲಿತಾಂಶ ಯಾವಾಗ ಬರುತ್ತೆ ಗೊತ್ತಿಲ್ಲ. ದೊಡ್ಡವರ ತೀರ್ಮಾ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂಜನಾದ್ರಿ ಬೆಟ್ಟವನ್ನು ಕೇವಲ ಪ್ರವಾಸೋದ್ಯಮಇಲಾಖೆಯೊಂದರಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾಲ್ಕಾರು ಇಲಾಖೆ ಸಹಯೋಗದಲ್ಲಿ ನಾವು ಅಭಿವೃದ್ಧಿ ಮಾಡಬೇಕಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತದೆ. ಇಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಈ ದೃಷ್ಟಿಯಿಂದ ನಾವು ಹಲವು ಸಚಿವರು ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.