ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಸೂಕ್ತ ಸಮಯವಲ್ಲ -ಹೆಚ್ . ವಿಶ್ವನಾಥ್

ಮೈಸೂರು: ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಸೂಕ್ತ ಸಮಯವಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಜುಲೈ 3ನೇ ವಾರದಲ್ಲಿ ಡೆಲ್ಟ್ ಪ್ಲಸ್ ಅಲೆ ಬರುತ್ತೆ ಅಂತಾ ಹೇಳುತ್ತಲೇ ಇದ್ದಾರೆ. ಡೆಲ್ಟಾ ಪ್ಲಸ್ ಮಕ್ಕಳ ಮೇಲೆ ಪರಿಣಾಮ ಬೀರುತ್ತೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಎಲ್ಲೆಡೆ ಒಂದು ರೀತಿಯ ಆತಂಕದ ವಾತಾವರಣವಿದೆ. ಪರೀಕ್ಷೆಗೆ ಮಕ್ಕಳಿಗೂ ಸರಿಯಾದ ಪಾಠ ಪ್ರವಚನಗಳಾಗಿಲ್ಲ. ಮಕ್ಕಳು ಶಾಲೆ ಮುಖ ನೋಡಿ ತಿಂಗಳುಗಟ್ಟಲೆ ಆಗಿದೆ. ಮಕ್ಕಳು ಆನ್ ಲೈನ್ ಪಾಠ ಕೇಳೋಕೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಿರುವಾಗ ಪರೀಕ್ಷೆ ಬೇಕಾ ಎಂದು ವಿಶ್ವನಾಥ್ ಕೇಳಿದರು.

ಪರೀಕ್ಷೆಯಿಂದ ಮಕ್ಕಳ ಮೇಲೆ ಅನಾಹುತವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ಸುರೇಶ್ ಕುಮಾರ್ ಪರೀಕ್ಷೆ ಹಠದಿಂದ ಹಿಂದೆ ಬರಬೇಕು ಎಂದು ಹೆಚ್.ವಿಶ್ವನಾಥ್ ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್ ಸಂಘಟನಾ ಚತುರ
ಡಿ.ಕೆ.ಶಿವಕುಮಾರ್ ಒಬ್ಬ ಸಂಘಟನಾ ಚತುರ. ಡಿಕೆಶಿ ಕರೆದಾಕ್ಷಣ ಯಾರೂ ಕಾಂಗ್ರೆಸ್ಗೆ ಹೋಗಲ್ಲ. ಆದರೆ ಅವರ ಸೌಜನ್ಯ ಇದೆಯಲ್ಲ ಅದು ಮೆಚ್ಚುವಂತಹದ್ದು ಎಂದು ವಿಶ್ವನಾಥ್ ಹೇಳಿದರು.

ಸಿದ್ದರಾಮಯ್ಯಗೆ ನಾವು ಬಂದುಬಿಡ್ತೀವಿ ಅನ್ನೋ ಆತಂಕನೂ ಬೇಡ ಎಂದು ಸಿದ್ದರಾಮಯ್ಯಗೆ ವಿಶ್ವನಾಥ್ ಟಾಂಗ್ ನೀಡಿದರು.

ನಿಮ್ಮನ್ನು ಜೆಡಿಎಸ್ನಿಂದ ಕಿತ್ತೆಸೆದಾಗ ಇದೇ ಡಿಕೆಶಿವಕುಮಾರ್ ನಾನು ಎಸ್.ಎಂ.ಕೃಷ್ಣ ಎಲ್ಲಾ ಸಿದ್ದರಾಮಯ್ಯನ ಕಾಂಗ್ರೆಸ್ ಸೇರಿಸಿಕೊಂಡ್ವಿ. ಅವಾಗ ಯಾರಾದರೂ ಸಿದ್ದರಾಮಯ್ಯ ಬಂದರೆ ಪ್ರಳಯ ಆಗುತ್ತೆ ಅಂದಿದ್ದರಾ ಎಂದರು.

ಸಿದ್ದರಾಮಯ್ಯ ದ್ವೇಷ ಸಾಧನೆ ಮಾಡುವುದಲ್ಲ. ಡಿಕೆಶಿವಕುಮಾರ್ ರಂತೆ ಸೌಜನ್ಯ ಸಿದ್ದರಾಮಯ್ಯಗೂ ಬರಬೇಕು ಎಂದು ವಿಶ್ವನಾಥ್ ಮಾರ್ಮಿಕವಾಗಿ ಹೇಳಿದರು.