ಮೈಸೂರು: ವಸತಿ ಸಚಿವ ವಿ.ಸೋಮಣ್ಣ ರವರ ಹುಟ್ಟು ಹಬ್ಬ ವನ್ನು ಅರ್ಥಪೂರ್ಣವಾಗಿ ಮಂಗಳವಾರ ಆಚರಿಸಲಾಯಿತು.
ನಗರದ ಹೃದಯ ಭಾಗವಾದ ಚಿಕ್ಕ ಮಾರ್ಕೆಟ್ ವೃತ್ತದಲ್ಲಿ ರಸ್ತೆಬದಿಯಲ್ಲಿ ಬಾಳೆಹಣ್ಣು, ನಿಂಬೆಹಣ್ಣು, ತರಕಾರಿ, ಚಾಪೆ, ವ್ಯಾಪಾರ ಮಾಡುವ ವ್ಯಕ್ತಿಗಳಿಗೆ ಉಚಿತವಾಗಿ ಕೊಡೆ, ಮಾಸ್ಕ್, ಮತ್ತು ಸಿಹಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಭಾ.ಜ.ಪ.ಅದ್ಯಕ್ಷ ಟಿ.ಎಸ್.ಶ್ರೀ ವತ್ಸ ರವರು ಮಾತನಾಡಿ, ಈ ದಿನ ರಸ್ತೆ ಬದಿ ವ್ಯಾಪಾರಿಗಳಿಗೆ ಕೊಡುತ್ತಿರುವ ಕೊಡೆ ಬಿಸಿಲಿನಲ್ಲಿ ಮತ್ತು ಮಳೆಯಲ್ಲಿ ವ್ಯಾಪಾರ ಮಾಡುತ್ತಿರುವವರು ರಕ್ಷಣೆ ಪಡೆಯಲಿ ಎಂದು ಹೇಳಿದರು.
ನಮ್ಮೆಲ್ಲರ ನಾಯಕರಾದ ವಿ.ಸೋಮಣ್ಣ ನವರಿಗೆ ಇಂದಿಗೆ 70 ವರ್ಷ ತುಂಬಿದ್ದು ಅವರು ಕಳೆದ ದಸರಾ ಸಂಧರ್ಭದಲ್ಲಿ ತುಂಬಾ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು ಎಂದರು.
ನಂತರ ವಿ. ಸೋಮಣ್ಣ ಅಭಿಮಾನಿ ಬಳಗದ ಮುಖ್ಯ ಸಂಚಾಲಕ ಕೇಬಲ್ ಮಹೇಶ್ ಮಾತನಾಡಿ ಕಳೆದ ವರ್ಷ ದಸರಾ ಸಂದರ್ಭದಲ್ಲಿ ಮೈಸೂರಿನ ಉಸ್ತುವಾರಿ ಸಚಿವರಾಗಿ ವಿ ಸೋಮಣ್ಣನವರು ನೇಮಕಗೊಂಡು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ, ಕಲಾವಿದರಿಗೆ ಸಂಭಾವನೆಯನ್ನು ನಿಗಧಿತ ಸಮಯಕ್ಕೆ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ನಗರ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು, ಬಿಜೆಪಿ ಮಾಧ್ಯಮ ಸಹ ಸಂಚಾಲಕ ಪ್ರದೀಪ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕರಾದ ರೇಣುಕರಾಜ, ವಿ ಸೋಮಣ್ಣ ಅಭಿಮಾನಿ ಬಳಗದ ಸುಚೀಂದ್ರ, ಪ್ರಮೋದ್ ಗೌಡ, ಮಂಜುನಾಥ, ನವೀನ್, ಶಂಭು ಪಾಟೀಲ್,ಭರತ್ ಹಾಗೂ ಇನ್ನಿತರರು ಹಾಜರಿದ್ದರು.

