ಮೈಸೂರು: ಕೋವಿಡ್-19ರ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮವನ್ನು ಶಾಸಕ ಎಸ್.ಎ. ರಾಮದಾಸ್ ರವರು ಮಂಗಳವಾರ ನಗರದಲ್ಲಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್ ಅವರು, ಇಂದು ಕೆ.ಆರ್ ಕ್ಷೇತ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ವಿಶೇಷವಾಗಿ ಅವರಿಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ನಿಂತುಹೋಗಿತ್ತು. ಈ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 5 ಸಾವಿರ ರೂಪಾಯಿ ಕೊಡಿಸುವ ಕೆಲಸ ಮಾಡಿತ್ತು. ಕೋವಿಡ್ 2ನೆ ಅಲೆಯಲ್ಲೂ ಸಹ 3 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ಇದೀಗ ಅವರಿಗೆ ಅಗತ್ಯವಿರುವ ಆಹಾರ ಪದಾರ್ಥಗಳ ಕಿಟ್ ಅನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಓರ್ವ ಕಟ್ಟಡ ಕಾರ್ಮಿಕ ತನ್ನ ಸ್ಕಿಲ್ ಗಳ ಮೂಲಕ ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಕೂಡ ಹೋಗಿ ಕೆಲಸ ಮಾಡಬಹುದು, ಅಂತಹ ಅವಕಾಶಗಳನ್ನು ಮೋದಿಜಿ ಸರ್ಕಾರ ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.
ಇಂತಹ ಸ್ಕಿಲ್ ಇರುವ ಕೆಲಸಗಾರರನ್ನು ಗುರುತಿಸಿ ವಿಶೇಷವಾದ ಪ್ರೋತ್ಸಾಹವನ್ನು ಕೊಡಬೇಕಾಗಿದೆ. ನಮ್ಮ ಕ್ಷೇತ್ರದಲ್ಲಿರುವ ಕಟ್ಟಡ ಕಟ್ಟುವಂಥಹ ಕಾರ್ಮಿಕರುಗಳಿಗೆ ಯಾರು ಸ್ವಂತ ಮನೆಗಳಿಲ್ಲ ಅವರಿಗೆ ಸರ್ಕಾರದ ವತಿಯಿಂದ ಅವರಿಗೆ ಸವಲತ್ತುಗಳನ್ನು ಹಾಗೂ ಆಶ್ರಯ ಅಡಿಯಲ್ಲಿ ಮನೆಗಳನ್ನು ಕೊಡುವ ಕೆಲಸಗಳನ್ನು ಮುಂದೆ ಮಾಡಲಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕೆ ಸದಸ್ಯರಾದ ಶಾಂತಮ್ಮ ವಡಿವೇಲು,ಕಾರ್ಮಿಕ ಇಲಾಖೆ ಅಧಿಕಾರಿ ರಾಜೇಶ್ ಜಾಧವ್, ಟಿ ಎನ್ ಹೇಮಂತ್ ರವರು, ಅಜಿತ್ ನಾರಾಯಣ್ , ಕ್ರೆಡಾಯ್ ನ ಅಧ್ಯಕ್ಷ ಮುರಳೀಧರ ರವರು ಹಾಜರಿದ್ದರು.

