ನಂಜನಗೂಡು ದೇವಾಲಯ ಧ್ವಂಸ ಪ್ರಕರಣ:ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ –ಸಿಎಂ ಬೊಮ್ಮಾಯಿ

ದಾವಣಗೆರೆ: ನಂಜನಗೂಡು ದೇವಾಲಯ ಧ್ವಂಸ ಪ್ರಕರಣ ಸಂಬಂಧ ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ದೇವಸ್ಥಾನ ತೆರವುಗೊಳಿಸಿರುವುದರಿಂದ ಅಲ್ಲಿನ ಭಕ್ತರಿಗೆ ಘಾಸಿಯಾಗಿದೆ. ಆದರೆ ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇನೆ. ಪಕ್ಷದ ಮಾರ್ಗದರ್ಶನ ಪಡೆದು ಆ ಭಾಗದ ಜನರ ಭಾವನೆಗೆ ಸ್ಪಂದನೆ ಮಾಡುವ ಕೆಲಸ ಮಾಡುತ್ತೇನೆ. ಎಲ್ಲರಿಗೂ ಒಪ್ಪಿಗೆ ಆಗುವಂತ ನಿರ್ಣಯವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಸರ್ಕಾರ ನಮ್ಮ ಕಾರ್ಯಕರ್ತರದ್ದು, ಕಾರ್ಯಕರ್ತರ ಭಾವನೆ ನಮಗೆ ಅರ್ಥವಾಗುತ್ತದೆ. ಅವರ ಭಾವನೆಗೆ ಬೆಲೆ ಕೊಡುವಂತ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ ಸಿಎಂ ಬೊಮ್ಮಾಯಿ ಹೇಳಿದರು.

ದೇಶದ ಶಾಂತಿ ಕದಡುವ ಪ್ರಯತ್ನಗಳು ನಡೆದಿದ್ದು, ಗುಜರಾತ್ ಸೇರಿದಂತೆ ಬೇರೆ-ಬೇರೆ ರಾಜ್ಯಗಳಲ್ಲು ಇದು ನಡೆದಿದೆ, ದೇಶ ಅಭದ್ರ ಮಾಡುವ ಕೆಲ ಸಂಗತಿಗಳು ನಡೆಯುತ್ತಿವೆ ಇದಕ್ಕೆ ಕೆಲ ಅಧಿಕಾರಿಗಳು ಕೈ ಜೋಡಿಸಿದ್ದಾರೆಂದರು.