ಛತ್ತೀಸ್ ಗಢ: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಸೆಂಟ್ರಲ್ ರಿಸರ್ವ್ ಪೆÇಲೀಸ್ ಫೆÇೀರ್ಸ್ (ಸಿಆರ್‍ಪಿಎಫ್) ಶಿಬಿರದಲ್ಲಿ ಯೋಧರೊಬ್ಬ ತನ್ನ ಸಹಚರರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಸುಕ್ಮಾ ಜಿಲ್ಲೆಯ ಲಿಂಗಂಪಲ್ಲಿ ಗ್ರಾಮದಲ್ಲಿರುವ ಸಿಆರ್‍ಪಿಎಫ್‍ನ 50ನೇ ಬೆಟಾಲಿಯನ್ ನ ಕ್ಯಾಂಪ್ ನಲ್ಲಿ ಯೋಧನೊಬ್ಬ ತನ್ನ ಸಹಚರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಾಜ್ಯದ ಬಸ್ತಾರ್ ಪ್ರದೇಶದ ಪೆÇಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ ಸೋಮವಾರ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸುಕ್ಮಾದ ಲಿಂಗಂಪಲ್ಲಿ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ.
ಸೋಮವಾರ ಮುಂಜಾನೆ 3.30ರ ಸುಮಾರಿಗೆ ಯೋಧನೊಬ್ಬ ತನ್ನ ಎಕೆ-47 ರೈಫಲ್‍ನಿಂದ ಇತರ ಯೋಧರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೆÇಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಸುಂದರರಾಜ್ ಹೇಳಿದ್ದಾರೆ.

