ಬಿಜೆಪಿ ಮತಿಗೇಡಿ-ಅಪಾಯಕಾರಿ ಬೆಂಬಲಿಗರನ್ನು ಸೃಷ್ಟಿಸಿದೆ -ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು: ರೈತರಿಗಾಗಿ ಜಾರಿಗೊಳಿಸಿದ ಕೃಷಿಕಾಯ್ದೆಗಳನ್ನು ದೇಶಕ್ಕಾಗಿ ಹಿಂಪಡೆಯುವುದು ಎಂದರೆ ಅರ್ಥವೇನು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪ್ರಶ್ನಿಸಿದ್ದಾರೆ.

ರೈತರಿಗಾಗಿ ಜಾರಿಗೊಳಿಸಿ ದೇಶಕ್ಕಾಗಿ ಹಿಂಪಡೆಯುವುದು ಎಂದರೆ ಅರ್ಥವೇನು? ಎಂದು ಮಹದೇವಪ್ಪನವರು ಟ್ವೀಟ್ ಮಾಡಿದ್ದಾರೆ.

ರೈತರು ದೇಶದಿಂದ ಹೊರತಾಗಿದ್ದಾರೆ ಎಂದೇ? ರಾಜ್ಯ ಬಿಜೆಪಿ ಪಕ್ಷವು ಎಂತಹ ಮತಿಗೇಡಿ ಮತ್ತು ಅಪಾಯಕಾರಿ ಬೆಂಬಲಿಗರನ್ನು ಸೃಷ್ಟಿಸಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ ಎಂದು ವ್ಯಂಗ್ಯವಾಡಿದ್ದಾರೆ.

ರೈತ ವಿರೋಧಿ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಪ್ರಧಾನಿಗಳು ಘೋಷಿಸಿದ ಬೆನ್ನಲ್ಲೇ ಅವರ ಪಕ್ಷದ ಬೆಂಬಲಿಗರು ಹೊಸ ವರಸೆ ತೆಗೆದಿದ್ದಾರೆ ಅವರ ಹೊಸ ವರಸೆಯ ಪ್ರಕಾರ ಪ್ರಧಾನಿಗಳು ಅಂದು ರೈತರಿಗಾಗಿ ಈ ಕಾಯ್ದೆಯನ್ನು ಜಾರಿಗೊಳಿಸಿದರು. ಆದರೆ ಇಂದು ದೇಶಕ್ಕಾಗಿ ಈ ಕಾಯ್ದೆಯನ್ನು ಹಿಂಪಡೆದಿದ್ದಾರೆ ಎಂಬುದಾಗಿದೆ ಎಂದು ಟೀಕಿಸಿದ್ದಾರೆ.