ಮುಂಬೈ: ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರಿಗೆ ಕೊಲೆ ಬೆದರಿಕೆ ಬಂದಿದ್ದು,ಅವರು ಈ ಕುರಿತು ಎಫ್‍ಐಆರ್ ದಾಖಲಿಸಿದ್ದಾರೆ.
ಕಂಗನಾ ರಾಣಾವತ್ ಕೊಲೆ ಬೆದರಿಕೆಯ ಮಾಹಿತಿ ಮತ್ತು ಎಫ್‍ಐಆರ್ ಪ್ರತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರನ್ನು ಸ್ಮರಿಸುತ್ತ, ನಾನು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ದೇಶದ್ರೋಹಿಗಳನ್ನು ಮರೆಯುವುದಿಲ್ಲ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದಿದ್ದೇನೆ. ಅಂತಹ ಘಟನೆಯಲ್ಲಿ ದೇಶದ ಆಂತರಿಕ ದ್ರೋಹಿಗಳ ಕೈವಾಡವಿದೆ. ದೇಶದ್ರೋಹಿಗಳು ಹಣದ ದುರಾಸೆಯಲ್ಲಿ ಮತ್ತು ಅಧಿಕಾರದ ದುರಾಸೆಯಲ್ಲಿ ಭಾರತಮಾತೆಯನ್ನು ಕಳಂಕಗೊಳಿಸಲು ಒಂದೇ ಒಂದು ಅವಕಾಶವನ್ನು ಬಿಡಲಿಲ್ಲ, ದೇಶದ್ರೋಹಿಗಳು ಪಿತೂರಿ ಮಾಡುವ ಮೂಲಕ ದೇಶ ವಿರೋಧಿ ಶಕ್ತಿಗಳಿಗೆ ಸಹಾಯ ಮಾಡುತ್ತಲೇ ಇರುತ್ತಾರೆ, ಆಗ ಮಾತ್ರ ಇಂತಹ ಘಟನೆಗಳು ನಡೆಯುತ್ತವೆ ಎಂದು ಬರೆದುಕೊಂಡಿದ್ದೆ. ಇದಕ್ಕೆ ಈ ತರದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಈ ಪೆÇೀಸ್ಟ್ ನಲ್ಲಿ ನನಗೆ ವಿಚ್ಛಿದ್ರಕಾರಕ ಶಕ್ತಿಗಳಿಂದ ನಿರಂತರ ಬೆದರಿಕೆಗಳು ಬರುತ್ತಿವೆ. ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಅಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ದೇಶದ ವಿರುದ್ಧ ಪಿತೂರಿ ನಡೆಸುವವರ, ಭಯೋತ್ಪಾದಕರ ವಿರುದ್ಧ ಮಾತನಾಡುತ್ತೇನೆ. ಯಾವತ್ತೂ ಮಾತಾಡುತ್ತಲೇ ಇರುತ್ತೇನೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

