ಹುಬ್ಬಳ್ಳಿ: 2023ರ ವರೆಗೂ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿಎಂ ಬದಲಾವಣೆಯಾಗ್ತಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರಾಲ್ಲ ಎಂಬ ಪ್ರಶ್ನೆಗೆ ಜೋಶಿ ಅವರು ಪ್ರತಿಕ್ರಿಯಿಸಿ, ಆ ರೀತಿ ಏನೂ ಇಲ್ಲ. ಸಿಎಂ ಬದಲಾಣೆಯಾಗೋದಿಲ್ಲ. 2023ರ ವರೆಗೂ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ ಎಂದರು.
ಈಶ್ವರಪ್ಪನವರು ಶಿಘ್ರವೇ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ. ಆದರೂ ಈ ರೀತಿ ಹೇಳಿಕೆ ನೀಡೋದು ತಪ್ಪು ಎಂದು ಜೋಶಿ ಹೇಳಿದರು.
ಗುತ್ತಿಗೆದಾರರ ಸಂಘದಿಂದ ಪ್ರಧಾನಿಗೆ ಪತ್ರ ವಿಚಾರ ಕುರಿತು ಮಾತನಾಡಿದ ಅವರು ಅದೊಂದು ಬೇಸ್ ಲೆಸ್ ಆರೋಪ. ಅವರ ಹತ್ತಿರ ಏನಾದರೂ ಸಾಕ್ಷಿ ಇದ್ದರೆ ಕೊಡಲಿ ಅದನ್ನ ತನಿಖೆ ಮಾಡೋಣ ಎಂದು ಸವಾಲು ಹಾಕಿದರು.
ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನ ಸಹಿಸೋದಿಲ್ಲ. ಆಧಾರವಿದ್ದರೆ ಅವರು ದೂರು ನೀಡಲಿ ಎಂದರು.
ಪ್ರಧಾನಿಯವರನ್ನು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಭೇಟಿಯಾಗಿದ್ದಾರೆ. ಅವರು ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜಕೀಯವಾಗಿ ಮಾತಾನಡಿದ್ದಾರೆ ಅಂತ ಹೇಳಿಲ್ಲ. ಹಾಸನದ ಐಐಟಿ ಮತ್ತು ಕೆಲವು ಅಭಿವೃದ್ದಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಜೆಡಿಎಸ್ ಜೊತೆ ಮೈತ್ರಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ಜೋಶಿ ತಿಳಿಸಿದರು.

