ಜಮ್ಮು: ಜಮ್ಮುವಿನ ಹೆದ್ಧಾರಿಯಲ್ಲಿ ಭಯೋತ್ಪಾದಕರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಸಿದ್ರಾ ಬೈಪಾಸ್ ಪ್ರದೇಶದ ತಾವಿ ಸೇತುವೆ ಬಳಿ ಬೆಳಿಗ್ಗೆ 7.30 ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ.
ಕಾಶ್ಮೀರದ ಕಡೆಗೆ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಟ್ರಕ್‍ನ ಗಮನಿಸಿ ಭ್ರದತಾ ಪಡೆಗಳು ಹಿಂಬಾಲಿಸಿ
ಸಿದ್ರಾ ಚೆಕ್ ಪಾಯಿಂಟ್ ತಡೆದು ನಿಲ್ಲಿಸಿವೆ.
ಟ್ರಕ್ ಚಾಲಕ ಪರಾರಿಯಾಗಿದ್ದಾನೆ.
ತಕ್ಷಣ ಪೊಲೀಸರು ಟ್ರಕ್ ಶೋಧಿಸಲಾ ರಂಭಿಸಿದಾಗ ಒಳಗಿನಿಂದ ಗುಂಡಿನ ದಾಳಿ ನಡೆದಿದೆ.
ಇದಕ್ಕೆ ಪ್ರತಿಯಾಗಿ ನಮ್ಮ ಪೊಲೀಸರೂ ಗುಂಡಿನ ದಾಳಿ ನಡೆಸಿದ್ದಾರೆ.
ಈ ಸಮಯದಲ್ಲಿ ಗ್ರೆನೇಡ್‍ಗಳಿಂದ ಸ್ಪೋಟ ಕೂಡಾ ಸಂಭವಿಸಿದೆ.
ಈ ವೇಳೆ ಮೂವರು ಶಂಕಿತ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.
ಗುಂಡಿನ ದಾಳಿಯಿಂದ ಟ್ರಕ್‍ಗೆ ಬೆಂಕಿ ಹತ್ತಿಕೊಂಡಿದೆ. ಭಯೋತ್ಪಾದಕರ ಮೂಲ ಪತ್ತಗೆ ತನಿಖೆ ಆರಂಭಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಭಯೋತ್ಪಾದಕರು ಗಡಿಯಾಚೆಯಿಂದ ಬಂದಿರುವ ಶಂಕೆಯಿದೆ ಎಂದು ಕೂಡಾ ಅವರು ಹೇಳಿದ್ದಾರೆ.

