ಅಹಮದಾಬಾದ್: ಅಹಮದಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಹೀರಾಬೆನ್ ಅವರಿಗೆ 100 ವರ್ಷವಾಗಿತ್ತು. ಅವರು ಮುಂಜಾನೆ 3:30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಹೀರಾಬೆನ್ ಅವರ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಅಹಮದಾಬಾದ್ನ ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್ಗೆ ದಾಖಲಿಸಲಾಗಿತ್ತು.
ಬೆಳಗ್ಗೆ ಗುಜರಾತ್ ತಲುಪಿದ ಪ್ರಧಾನಿ ಮೊದಲು ಅವರ ರೇಸನ್ ನಿವಾಸದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಗಾಂಧಿನಗರದಲ್ಲಿ ಹೀರಾಬೆನ್ ಮೋದಿಯವರ ಅಂತಿಮ ಯಾತ್ರೆ ಆರಂಭವಾದಾಗ ತಾಯಿಯ ಪಾರ್ಥಿವ ಶರೀರಕ್ಕೆ ನರೇಂದ್ರ ಮೋದಿ ಭುಜ ಕೊಟ್ಟರು.
ತಾಯಿ ಹೀರಾಬೆನ್ ಅವರ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ಮೋದಿ ನರೆವೇರಿಸಿದರು.
ಗುಜರಾತ್ ರಾಜಧಾನಿ ಗಾಂಧಿನಗರದ ಸೆಕ್ಟರ್ 30 ರಲ್ಲಿ ಮುಕ್ತಿಧಾಮ್ ಸ್ಮಶಾನದಲ್ಲಿ ಹೀರಾಬೆನ್ ಮೋದಿಯವರ ಅಂತ್ಯಕ್ರಿಯೆಗಳು ನಡೆದವು.
ಬಳಿಕ ತಾಯಿಯ ಪಾರ್ಥಿವ ಶರೀರದೊಂದಿಗೆ ಅಂತಿಮ ಸಂಸ್ಕಾರಕ್ಕಾಗಿ ಚಿತಾಗಾರಕ್ಕೆ ಕೊಂಡೊಯ್ದರು.
ಹೀರಾಬೆನ್ ಚಿತೆಗೆ ಮೋದಿ ಹಾಗೂ ಸಹೋದರರು ಅಗ್ನಿಸ್ಪರ್ಶ ಮಾಡಿದ್ದಾರೆ.
ಹೀರಾಬೆನ್ ಮೋದಿ ಅವರ ನಿಧನದ ಸುದ್ದಿ ತಿಳಿದು ರಾಜಕೀಯ ನಾಯಕರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ

