ಸಂಘ ಪರಿವಾರ ಸುಳ್ಳಿನ ಕಾರ್ಖಾನೆ -ಸಿಎಂ ಸಿದ್ದರಾಮಯ್ಯ

ಗದಗ: ಬಿಜೆಪಿ ಸಂಘ ಪರಿವಾರದ ಎಬಿವಿಪಿ, ಬಜರಂಗ ದಳ, ಯುವ ಮೋರ್ಚಾ ಎಲ್ಲಾ ಸುಳ್ಳಿನ ಕಾರ್ಖಾನೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಗದಗದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ,ಸಂಘ ಪರಿವಾರ ಸುಳ್ಳಿನ ಕಂತೆಗಳು ಎಂದು ಜರಿದರು

ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯಿಂದ ತೊಂದರೆಯಾಗಿದೆ ಎಂದು ಹೇಳಲಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಎಬಿವಿಪಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾಗಿದ್ದು, ಸುಳ್ಳು ಹೇಳುವುದೇ ಅವರ ಕೆಲಸ ಎಂದು ಕುಟುಕಿದರು.

ಭಾರತ ಉಳಿಯಬೇಕೆಂದರೆ ಹಿಂದೂ ರಾಷ್ಟವಾಗಬೇಕು ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಬಿಜೆಪಿಯ ಘೋಷವಾಕ್ಯ ಎಂದರು.

ಹಿಂದೂ ರಾಷ್ಟ್ರ ವಾಗಬೇಕೆಂದು ಜನಸಂಘ 1950ರಲ್ಲಿ ಪ್ರಾರಂಭವಾದಾಗಲೇ ಹೇಳಿದರು. ನಮ್ಮ ದೇಶದಲ್ಲಿ ಬರೀ ಹಿಂದೂಗಳಲ್ಲ, ಕ್ರಿಶ್ಚಿಯನ್, ಮುಸ್ಲಿಂ, ಜೈನರು, ಭೌದ್ಧರೂ ಇದ್ದಾರೆ.

ನಮ್ಮ ದೇಶ ಬಹುತ್ವದ ದೇಶ. ಬರೀ ಹಿಂದುಗಳ ರಾಷ್ಟ್ರ ಮಾಡಿದರೆ ಆಗೋದಿಲ್ಲ, ಅದು ಬಿಜೆಪಿಯ ಸಿದ್ದಾಂತ.

ದೇಶವನ್ನು ಹಿಂದೂಗಳ ರಾಷ್ಟ್ರ ಮಾಡೋಕೆ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

1925 ರಲ್ಲಿ ಆರ್.ಎಸ್.ಎಸ್.ಅನ್ನು ಹೆಗಡೆ ವಾರ್ ಸ್ಥಾಪನೆ ಮಾಡಿದ್ದರು. ಬಿಜೆಪಿ ಯವರಿಗೆ ಕೂಡ ಇದು ತಿಳಿದಿಲ್ಲ. ಸುಮ್ಮನೇ ಬುರುಡೆ ಹೊಡೆಯುತ್ತಾರೆ ಎಂದು ಟೀಕಿಸಿದರು.