ಮೈಸೂರು: ಮುಖ್ಯ ಮಂತ್ರಿ ಆದವರು ಪದ ಪ್ರಯೋಗ ಮಾಡುವಾಗ ಎಚ್ಚರವಹಿಸಬೇಕು,ಎಲ್ಲರನ್ನು ತಾತ್ಸರದಿಂದ ಮಾತಾಡುವುದು ನಿಲ್ಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಸಾಯೋವರೆಗೂ ನಾನು ಪಾಲಿಟಿಕ್ಸ್ ಮಾಡಲು ಬಂದಿಲ್ಲ,
ಸಾಯೋವರೆಗೂ ಪಾಲಿಟಿಕ್ಸ್ ಮಾಡುವವರಿಗೆ ಹೇಳಿ ಕೊಳ್ಳಲು ಏನೂ ಇಲ್ಲದೆ ಇದ್ದಾಗ ಈ ರೀತಿ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗುತ್ತದೆ ಎಂದು ಟೀಕಿಸಿದರು.
ಮೈಸೂರು – ಬೆಂಗಳೂರು ಹೈವೆ ವಿಚಾರದಲ್ಲಿ ಮೈಸೂರು ಸಂಸದ ಬುರುಡೆ ಬಿಡುತ್ತಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ,
ಯಾರು ಬುರುಡೆ ಬಿಡುತ್ತಿದ್ದಾರೆ, ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತು ಎಂದು ಹೇಳಿದರು.
ರಸ್ತೆಯಲ್ಲಿ ನೀರು ತುಂಬಿದ್ದಾಗ, ಅಂಡರ್ ಪಾಸ್ ನಲ್ಲಿ ನೀರು ತುಂಬಿದಾಗ ಬೈಯ್ದಿದ್ದು ಯಾರನ್ನಾ,ಆ ಸಮಸ್ಯೆ ಪರಿಹರಿಸಿದ್ದು ಯಾರು,ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಬೈಯ್ದಿದ್ದು ಯಾರನ್ನ, ಆ ಸಮಸ್ಯೆ ಬಗೆಹರಿಸಿದ್ದು ಯಾರು,
ಬೈಯ್ದಿದ್ದು ಪ್ರತಾಪ್ ಸಿಂಹನನ್ನೇ ಅಲ್ಲವೇ, ಸಮಸ್ಯೆ ಪರಿಹರಿಸಿದ್ದೂ ಪ್ರತಾಪ್ ಸಿಂಹನೇ ಎಂಬುದನ್ನು ಮರೆಯಬೇಡಿ ಎಂದು ತಿರುಗೇಟು ಕೊಟ್ಟಿದ್ದಾರೆ
8,500 ಸಾವಿರ ಕೋಟಿ ರೂ ಪ್ರಾಜೆಕ್ಟ ಇದು,ಇದಕ್ಕೇನಾದರೂ ಸಿದ್ದರಾಮಯ್ಯ ಅವರ ಸರಕಾರದಲ್ಲಿ 8 ರೂಪಾಯಿ ಕೊಟ್ಟಿದ್ದರೆ ಸಿದ್ದರಾಮಯ್ಯ – ಮಹಾದೇವಪ್ಪ ಜೋಡಿ ರಸ್ತೆ ಅಂತಾ ಹೆಸರಿಟ್ಟು ಬಿಡೋಣ ಎಂದು ಸವಾಲು ಹಾಕಿದರು.
ಇದು ನನ್ನ ರಸ್ತೆಯಲ್ಲ, ಮೋದಿ ಅವರ ರಸ್ತೆ. ನಾನು ಒಬ್ಬ ಮೇಸ್ತ್ರಿ, ಮೋದಿ ಅವರ ಹೈವೆ ಇದು, ನಾನು ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ ಅಷ್ಟೇ ಎಂದು ತಿಳಿಸಿದರು.
ಸಂಸತ್ ಭವನದೊಳಗೆ ಸ್ಮಾಕ್ ಬಾಂಬ್ ವಿಚಾರ,ಆರೋಪಿಗೆ ಸಂಸತ್ ಭವನದ ಪಾಸ್ ಕೊಟ್ಟಿದ್ದ ಕುರಿತು ಮಾಧ್ಯಮದವರ ಪ್ರಶ್ನೆಗೆ,ಆ ವಿಚಾರದಲ್ಲಿ ಏನೂ ವಿವರಣೆಕೊಡುವುದಿಲ್ಲ.
ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ ಎಂದು ಪ್ರತಾಪ್ ಹೇಳಿದರು.
ಪ್ರತಾಪ್ ಸಿಂಹ ದೇಶದ್ರೋಹಿನಾ ದೇಶಪ್ರೇಮಿನಾ ಅಂತಾ ಬೆಟ್ಟದ ಚಾಮುಂಡಿ ತಾಯಿ, ಕೊಡಗಿನ ಕಾವೇರಿ ತಾಯಿ,
ನನ್ನ ಓದುಗರು, ಮೈಸೂರು, ಕೊಡಗು ಜನ ತೀರ್ಪು ನೀಡುತ್ತಾರೆ.
ಮುಂಬರುವ ಚುನಾವಣೆಯಲ್ಲಿ ನಾನು
ದೇಶಪ್ರೇಮಿನಾ ದೇಶದ್ರೋಹಿನಾ ಅಂತಾ ಜನ ತೀರ್ಮಾನ ಮಾಡುತ್ತಾರೆ ಎಂದು ಮುಗುಮ್ಮಾಗಿ ಹೇಳಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು,
ಮಹಾರಾಜರು ತಮ್ಮ ಮನೆಯ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲ ಅಂತಾ ಸಿದ್ದರಾಮಯ್ಯ ಹಿಂದೆ ಹೇಳಿದ್ದರು.
ಆ ಹೇಳಿಕೆ ಬಂದಾಗಲೇ
ಸಿದ್ದರಾಮಯ್ಯ ಪ್ರೀತಿ, ಅಭಿಮಾನ ಗೌರವ ಟಿಪ್ಪೂಗೆ ಹೊರತು ಮೈಸೂರು ಮಹಾರಾಜರಿಗೆ ಅಲ್ಲ ಅಂತಾ ಗೊತ್ತಾಯಿತು
ಸಿದ್ದರಾಮಯ್ಯ ಅವರ ನಿಷ್ಠೆ ಟಿಪ್ಪುಗೆ ಹೊರತು ಮಹಾರಾಜರಿಗೆ ಅಲ್ಲ ಎಂದು ತಿಳಿಸಿದರು.
ಹಿಜಬ್ ಎಂಬುದು ಹಿಂದೂ – ಮುಸ್ಲಿಂ ವಿಚಾರ ಅಲ್ಲ, ಸಮವಸ್ತ್ರ ಸಂಹಿತೆ ಇರುತ್ತದೆ ಅದು ಪಾಲನೆ ಆಗಬೇಕು ಅಷ್ಟೆ, ಇದನ್ನು ಮುಖ್ಯ ಮಂತ್ರಿಗಳು ಗಮನಿಸಲಿ ಎಂದು ಸಲಹೆ ನೀಡಿದರು
ಪ್ರಧಾನಿ ಏರ್ ಫೋರ್ಸ್ ಒನ್ ನಲ್ಲಿ ಅದು ಸರಕಾರದ ವಿಮಾನದಲ್ಲೆ ಓಡಾಡುತ್ತಾರೆ,ಹೀಗೆ
ಖಾಸಗಿ ಜೆಟ್ ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಎಂದೂ ಓಡಾಡುವುದಿಲ್ಲ ಅದನ್ನು ಅರಿತುಕೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ಪ್ರತಾಪ್ ಸಿಂಹ ನೇರವಾಗಿ ಹೇಳಿದರು.

